ಹಾರ್ಸಿಕಟ್ಟಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

Pratibha Karanji Innaguration
Published on

ಸಿದ್ದಾಪುರ: ತಾಲೂಕಿನ ವಾಜಗದ್ದೆ ಸಹಿಪ್ರಾ ಶಾಲೆಯ ಸಭಾಂಗಣದಲ್ಲಿ ಗ್ರಾಪಂ ಹಾರ್ಸಿಕಟ್ಟಾ, ಸಮೂಹ ಸಂಪನ್ಮೂಲ ಕೇಂದ್ರ ಹಾರ್ಸಿಕಟ್ಟಾ ಇವುಗಳ ಸಹಯೋಗದಲ್ಲಿ ಹಾರ್ಸಿಕಟ್ಟಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮಂಗಳವಾರ ನಡೆಯಿತು.

ವಾಜಗದ್ದೆ ದುರ್ಗಾವಿನಾಯಕ ದೇವಸ್ಥಾನದ ಮೊಕ್ತೆಸರ ಎಸ್.ಎಂ.ಹೆಗಡೆ ಪೆಟೇಸರ ಪ್ರತಿಭಾ ಕಾರಂಜಿ ಉದ್ಘಾಟಿಸಿದರು. ಶಾಲಾ ಎಸ್​ಡಿಎಂಸಿ ಅಧ್ಯಕ್ಷ ಪ್ರಸನ್ನ ಪಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಅನಂತ ಹೆಗಡೆ ಹೊಸಗದ್ದೆ, ದುರ್ಗಾವಿನಾಯಕ ಕೃಷಿಕ ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ, ಸಿಆರ್​ಪಿ ಶೋಭಾ ಡಿ.ಸಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ನಾಗರಾಜ ಮಡಿವಾಳ, ಕಾನಗೋಡ ಸಿಆರ್​ಪಿ ಗಣೇಶ ಕೊಡಿಯಾ, ಹಾರ್ಸಿಕಟ್ಟಾ ಸಹಿಪ್ರಾ ಶಾಲೆಯ ಮುಖ್ಯಾಧ್ಯಾಪಕಿ ವಿಜಯಾ ನಾಯ್ಕ, ವಾಜಗದ್ದೆ ಸಹಿಪ್ರಾ ಶಾಲೆಯ ಮುಖ್ಯಾಧ್ಯಾಪಕ ಕೃಷ್ಣ ಎನ್.ಹೆಗಡೆ ಇತರರಿದ್ದರು.

ಬಹುಮಾನ ವಿತರಣೆ: ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಿಇಒ ಜಿ.ಐ. ನಾಯ್ಕ ಬಹುಮಾನ ವಿತರಿಸಿದರು. ಬಿಆರ್​ಸಿ ಸಮನ್ವಯಾಧಿಕಾರಿ ಚೈತನ್ಯಕುಮಾರ, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಭೂಮೇಶ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಇತರರಿದ್ದರು. ಶಿಕ್ಷಕ ವಿನಾಯಕ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net