ಹಾರ್ಸಿಕಟ್ಟಾ ಗ್ರಾಪಂ ಕಾರ್ಯದರ್ಶಿ ಸಾಗರೇಕರ್ ಬೀಳ್ಕೊಡುಗೆ

1sdp4 SAGAREKAR SANMAN
Published on

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯಿತಿಯಲ್ಲಿ 16 ವರ್ಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಶನಿವಾರ ನಿವೃತ್ತಿ ಹೊಂದಿದ ಶಿವಾಜಿ ಎಸ್. ಸಾಗರೇಕರ್ ಅವರನ್ನು ಗ್ರಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೃದಯರ್ಸ³ಯಾಗಿ ಬೀಳ್ಕೊಡಲಾಯಿತು.

ತಾಪಂ ಇಒ ದೇವರಾಜ ಎಂ. ಹಿತ್ತಲಕೊಪ್ಪ ಮಾತನಾಡಿ ಪ್ರಾಮಾಣಿಕತೆ, ಸಮಯ ಪ್ರಜ್ಞೆ, ನಿಷ್ಠೆ, ಶಿಸ್ತು , ತಾಳ್ಮೆ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜ ಅಂಥವರನ್ನು ಗೌರವಿಸುತ್ತದೆ. ನಿವೃತ್ತಿ ಹೊಂದಿದ ಎಸ್. ಎಸ್. ಸಾಗರೇಕರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಂಡಿದ್ದು ಅವರ ಜನಪ್ರಿಯತೆಗೆ ಕಾರಣವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಹನುಮಕ್ಕ ಭೋವಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಸಿದ್ದಾರ್ಥ ಗೌಡರ್, ಸದಸ್ಯರಾದ ಅನಂತ ಹೆಗಡೆ, ಅಶೋಕ ನಾಯ್ಕ, ಗೋಪಾಲ ದೇವಾಡಿಗ, ಪಿಡಿಒ ರಾಜೇಶ ನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷರಾದ ಡಾ.ರವೀಂದ್ರ ಹೆಗಡೆ, ಸೀಮಾ ಎಂ. ಹೆಗಡೆ, ಉಪಾಧ್ಯಕ್ಷ ಎ.ಜಿ. ಹೆಗಡೆ, ಸದಸ್ಯರಾದ ಮಧುಕೇಶ್ವರ ಹೆಗಡೆ, ಪ್ರೇಮಾ ನಾಯ್ಕ, ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಸ್ಥಳೀಯ ಪ್ರಮುಖರಾದ ಅನಂತ ಶಾನಭಾಗ ರಮೇಶ ಹೆಗಡೆ ಹಾರ್ಸಿಮನೆ, ನೂರ್ಲಾಮಿನ್ ಸಾಬ್ ಇತರರಿದ್ದರು. ಅನಂತ ಹೆಗಡೆ ಹೊಸಗದ್ದೆ ಹಾಗೂ ಶಿಕ್ಷಕ ನಾಗರಾಜ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net