ಯುವ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ

youth
ಯುವ ಕಾಂಗ್ರೆಸ್‌ನ ಜಿಲ್ಲೆಯ ವಿವಿಧ ಘಟಕಗಳ ಪದಾಧಿಕಾರಿಗಳು.
Published on

ಶಿವಮೊಗ್ಗ: ಯುವ ಕಾಂಗ್ರೆಸ್ ಪದಾಧಿಕಾರಿಗಳ ಹುದ್ದೆಗೆ ನಡೆದ ಚುನಾವಣೆಯಲ್ಲಿ ಹರ್ಷಿತ್ ಗೌಡ ದೊಡ್ಡ ಅಂತರದ ಗೆಲುವು ಸಾಧಿಸಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 64,313 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಹರ್ಷಿತ್ ಗೌಡ 48,473 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಹಿಂದೆ ಅಧ್ಯಕ್ಷರಾಗಿದ್ದ ಎಚ್.ಪಿ.ಗಿರೀಶ್ 16,065 ಮತಗಳನ್ನಷ್ಟೇ ಪಡೆದು ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಗಿರೀಶ್ ಅವರೊಂದಿಗೆ ನಾಗರಾಜ ಜಯಪ್ಪ, ಎನ್.ಗಿರೀಶ್ ಕೂಡ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ಖಾಸಿಫ್ ಖಾನ್, ಆಕಾಶ್, ಎಂ.ಡಿ.ಧನುಷ್, ಎಂ.ಅಶೋಕ್, ಎಸ್.ಸಿ.ನಿಖಿಲ್, ಎಸ್.ಶಿವರಾಜ್, ಮೊಹಮ್ಮದ್ ಸಾಜಿದ್, ಎಸ್.ಜಿ.ಶಿವಶಂಕರ, ಎ.ರೇಷ್ಮಾ, ಮೊಹಮ್ಮದ್ ಇರ್ಫಾನ್, ಹರ್ಷಿತಾರಾಣಿ ಮಹೇಂದ್ರಕರ್, ಅಬ್ದುಲ್ ಸತ್ತಾರ್ ಆಯ್ಕೆಯಾಗಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿವರ: ಭದ್ರಾವತಿ ಗ್ರಾಮಾಂತರ-ಮುಕ್ಸುದ್ ಅಹಮದ್, ಭದ್ರಾವತಿ ನಗರ-ಜೆ.ಅಭಿಷೇಕ್, ಸಾಗರ ಬ್ಲಾಕ್-ಸದ್ದಾಂ ಹುಸೇನ್, ಹೊಸನಗರ-ಎಂ.ಎನ್.ವಿಜಯ, ಶಿಕಾರಿಪುರ-ಎಚ್.ಎಂ.ಶಿವು, ಶಿರಾಳಕೊಪ್ಪ- ಮೊಹಮ್ಮದ್ ಅತೀಕ್, ಶಿವಮೊಗ್ಗ ಉತ್ತರ-ಆರ್.ಗಿರೀಶ್, ಶಿವಮೊಗ್ಗ ದಕ್ಷಿಣ-ಮೊಹಮ್ಮದ್ ಗೌಸ್, ಶಿವಮೊಗ್ಗ (ಗ್ರಾ.)-ಕೆ.ಶಶಿಕುಮಾರ್, ಹೊಳೆಹೊನ್ನೂರು ಬ್ಲಾಕ್-ಡಿ.ಟಿ.ಪ್ರವೀಣ್‌ಕುಮಾರ್, ಸೊರಬ-ಯಶೋಧರ ಸಿ. ನಾಯಕ್, ಆನವಟ್ಟಿ-ಎಂ.ಹರೀಶ, ತೀರ್ಥಹಳ್ಳಿ ನಗರ-ಶ್ರೇಯಸ್ ಎಸ್. ರಾವ್, ತೀರ್ಥಹಳ್ಳಿ (ಗ್ರಾ.)-ಎಚ್.ಡಿ.ರವಿಕುಮಾರ್.

ವಿಧಾನಸಭಾವಾರು ನೂತನ ಅಧ್ಯಕ್ಷರು:

ಭದ್ರಾವತಿ- ಮಹಮ್ಮದ್ ಶಫಿ

ಸಾಗರ-ಎಚ್.ಜಿ.ಮಹೇಂದ್ರ

ಶಿಕಾರಿಪುರ-ಮಂಜು ನಾಯ್ಕ

ಶಿವಮೊಗ್ಗ-ಜೆ.ಚರಣ್

ಶಿವಮೊಗ್ಗ (ಗ್ರಾ.)-ಎಸ್.ಪ್ರವೀಣ್‌ಕುಮಾರ್

ಸೊರಬ-ಕೆ.ಪಿ.ಪ್ರವೀಣ್‌ಕುಮಾರ್

ತೀರ್ಥಹಳ್ಳಿ-ಜಿ.ಪಿ.ಪೂರ್ಣೇಶ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net