

ನಾಪೋಕ್ಲು: ಉತ್ತರಖಂಡದ ಹರಿದ್ವಾರದಲ್ಲಿ ಫೆ.2 ರಿಂದ 13 ರವರೆಗೆ ಜರುಗಲಿರುವ ರಾಷ್ಟ್ರೀಯ ಗೇಮ್ಸ್ ಹಾಕಿ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ (ಅಂಪೈರ್) ಕೊಡಗಿನ ಹರ್ಷಿತ್ ಅಯ್ಯಪ್ಪ ನೇಮಕಗೊಂಡಿದ್ದಾರೆ.
ಪ್ರಸ್ತುತ ಹಾಕಿ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಹರ್ಷಿತ್ ಅಯ್ಯಪ್ಪ ಮಡಿಕೇರಿ ತಾಲೂಕು ಬಲ್ಲಮಾವಟ್ಟಿ ಗ್ರಾಮದ ಅಪ್ಪಚೆಟ್ಟೋಳಡ ಬೋಪಯ್ಯ ಹಾಗೂ ಭೋಜಮ್ಮ ದಂಪತಿ ಪುತ್ರ.