ಹರ್ಷಾ ಯು.ಕೋಟ್ಯಾನ್ ವಿಶ್ವದಾಖಲೆ

Harsha
ಹರ್ಷ ಕೋಟ್ಯಾನ್
Published on

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಕರಾಟೆಪಟು ಹರ್ಷಾ ಯು.ಕೋಟ್ಯಾನ್ ಅವರು ಒಂದು ನಿಮಿಷದಲ್ಲಿ ಪಲ್ಟಿ ಹೊಡೆದು ತಲೆಯಿಂದ ಹೆಂಚು ಪುಡಿ ಮಾಡಿರುವ ಬಗ್ಗೆ ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಆಗಿದೆ.

ಮೂಡುಬಿದಿರೆ ಸಮಾಜ ಮಂದಿರದಲ್ಲ್ಲಿ ನಡೆದಿದ್ದ ದಿ ಅಲ್ಟಿಮೇಟ್ ಮಾರ್ಶಲ್ ಆರ್ಟ್ ಶೋನಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಈ ಸಾಧನೆ ವಿಶ್ವ ದಾಖಲೆಗೆ ಸೇರ್ಪಡೆಗೊಂಡಿದ್ದು, ಕರಾಟೆ ಗುರು ಶೋರಿನ್ ರಿಯೂ ಕರಾಟೆ ಸಂಸ್ಥೆ ನದೀಂ ಅವರು ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನೀಡಿರುವ ಪ್ರಮಾಣ ಪತ್ರ ಹಸ್ತಾಂತರಿಸಿದರು. ಈಕೆ ಪುತ್ತಿಗೆಪದವಿನ ಉಮೇಶ ಕೋಟ್ಯಾನ್ ಹಾಗೂ ಕುಶಾಲ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net