ವರಮಹಾಲಕ್ಷ್ಮೀ ಹಬ್ಬ: ಮುತ್ತೈದೆಯರಿಗೆ ಅರಿಷಿಣ, ಕುಂಕುಮ, ಬಳೆ ಕಿಟ್ ವಿತರಣೆ

Harapanahalli Habba
ದೇವರ ತಿಮ್ಮಲಾಪುರ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮುತ್ತೈದೆಯರಿಗೆ ಅರಿಷಿಣ, ಕುಂಕುಮ, ಬಳೆ ಇರುವ ಕಿಟ್ ನೀಡಲಾಯಿತು.
Published on

ಹರಪನಹಳ್ಳಿ: ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ತಾಲೂಕಿನ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಮುತ್ತೈದೆಯರಿಗೆ ಶುಕ್ರವಾರ ಅರಿಷಿಣ, ಕುಂಕುಮ, ಬಳೆ ಹೊಂದಿರುವ ಕಿಟ್ ವಿತರಿಸಲಾಯಿತು.

ದೇವರ ತಿಮ್ಮಲಾಪುರ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದ ಸುಮಂಗಲಿಯರಿಗೆ ಕಿಟ್ ನೀಡಲಾಯಿತು. ಅದರಂತೆ ಉಚ್ಚಂಗಿದುರ್ಗದ ಗ್ರಾಮದ ಐತಿಹಾಸಿಕ ಉಚ್ಚೆಂಗೆಮ್ಮ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ತದನಂತರ ಮಹಿಳೆಯರಿಗೆ ಅರಿಷಿಣ, ಕುಂಕುಮ, ಬಳೆ ವಿತರಿಸಲಾಯಿತು.

ಮುಜರಾಯಿ ಇಲಾಖೆ ಇಒ ಮಲ್ಲಪ್ಪ, ದೇವರ ತಿಮ್ಲಾಪುರ ದೇವಸ್ಥಾನದ ಆರ್ಚಕರಾದ ಪ್ರಸನ್ನ ವಿಷ್ಣುವರ್ಧನ್, ಪ್ರಸಾದ್ ಬಾಲಾಜಿ ಹಾಗೂ ಪುನೀತ್, ಪೂಜಾರ ರೇಣುಕಮ್ಮ, ಹೇಮಲತಾ, ಹನುಮಕ್ಕ, ರಂಜಿತ, ಮರಿಯಮ್ಮ, ರತ್ನಮ್ಮ, ಬಣಕರ್ ರೂಪ, ಅನಿತ, ರಾಮಕ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net