ವೈಕುಂಠ ಏಕಾದಶಿ ಪ್ರಯುಕ್ತ ದೇವರ ತಿಮ್ಲಾಪುರದಲ್ಲಿ ವಿಶೇಷ ಪೂಜೆ

020123 Harapanahalli Vaikunta Ekhadasi
Published on

ಹರಪನಹಳ್ಳಿ: ಪಟ್ಟಣದ ಹೊರವಲಯದಲ್ಲಿರುವ ದೇವರ ತಿಮ್ಲಾಪುರ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರು ದೇವರ ದರ್ಶನ ಪಡೆದರು.

ಕಾರ್ಯಕ್ರಮದ ಅಂಗವಾಗಿ ಶ್ರೀ ಸ್ವಾಮಿ ಮೂರ್ತಿಗೆ ವಿಶೇಷ ಪೂಜೆಯನ್ನು ನೇರವೇರಿಸಿ, ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಪೂರ್ವ ದ್ವಾರ ಬಾಗಿಲನ್ನು ಬಂದ್ ಮಾಡಿ, ಉತ್ತರ ದ್ವಾರ ಬಾಗಿಲ ಪಕ್ಕದಲ್ಲಿ ವೈಕುಂಠ ದರ್ಶನದ ಬಾಗಿಲನ್ನು ತೆರೆಯಲಾಗಿತ್ತು. ಈ ಬಾಗಿಲು ಮೂಲಕವೇ ಭಕ್ತರು ದೇಗುಲ ಪ್ರವೇಶಿಸಿ, ದೇವರ ದರ್ಶನ ಪಡೆದರು. ಧರ್ಮಕರ್ತರಾದ ಡಾ.ಹರ್ಷಕಟ್ಟಿ, ಪ್ರಮುಖರಾದ ಕಟ್ಟಿ ರಂಗಣ್ಣ, ಕಟ್ಟಿ ಆನಂದಪ್ಪ, ಹರೀಶ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net