ದುಗ್ಗಾವತ್ತಿ ಚೆಕ್ ಪೋಸ್ಟ್ ಬಳಿ ದಾಖಲೆಯಿಲ್ಲದ ರೂ.8 ಲಕ್ಷ ಜಪ್ತಿ

Car Money
Published on

ಹರಪನಹಳ್ಳಿ: ಎರಡು ಪ್ರತ್ಯೇಕ ಪ್ರಕರಣದಲ್ಲಿ ತಾಲೂಕಿನ ದುಗ್ಗಾವತ್ತಿ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಒಟ್ಟು 8 ಲಕ್ಷ ರೂ.ವನ್ನು ವಶಪಡಿಸಿಕೊಳ್ಳಲಾಗಿದ್ದು, ಹಲುವಾಗಲು ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

ಮುತ್ತೂಟ್ ಪೈನಾನ್ಸ್ ನ ಕೊಟ್ಟೂರು ಶಾಖೆಯ ಸಿಬ್ಬಂದಿ ಸಂತೋಷ ಹರಿಹರ ಕಡೆಯಿಂದ ಮೋಟಾರ್‌ಬೈಕ್ ಮೂಲಕ ಸಾಗುತ್ತಿದ್ದಾಗ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಲಾಗಿದೆ. ಅವರ ಬ್ಯಾಗ್‌ನಲ್ಲಿ 5 ಲಕ್ಷ ರೂ. ಪತ್ತೆಯಾಗಿವೆ. ಈ ಬಗ್ಗೆ ವಿಚಾರಿಸಿದಾಗ ಮುತ್ತೂಟ್ ಪೈನಾನ್ಸ್‌ನ ಹರಿಹರ ಶಾಖೆಯಿಂದ ಕೊಟ್ಟೂರು ಶಾಖೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಸರಿಯಾದ ದಾಖಲೆ ಒದಗಿಸಿಲ್ಲ. ಹೀಗಾಗಿ ಆ ಹಣವನ್ನು ಜಪ್ತಿ ಮಾಡಲಾಗಿದೆ.

ದಾವಣಗೆರೆ ಜಿಲ್ಲೆಯ ಕಕ್ಕರಗೊಳ್ಳದ ತಿಮ್ಮೇಶ ಹರಪನಹಳ್ಳಿ ಕಡೆಗೆ ಕಾರಿನಲ್ಲಿ ಬರುವಾಗ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ 3 ಲಕ್ಷ ರೂ. ಪತ್ತೆಯಾಗಿದೆ. ಆ ಹಣವನ್ನೂ ಜಪ್ತಿ ಮಾಡಲಾಗಿದೆ. ಎರಡೂ ಪ್ರಕರಣಗಳನ್ನು ಹಲುವಾಗಲು ಪಿಎಸ್‌ಐ ಗುರುರಾಜ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net