ಪೈಲ್ವಾನ್ ಹರಪನಹಳ್ಳಿ ತಿಪ್ಪೇಶ್‌ಗೆ ಬೆಳ್ಳಿಗದೆ

MAR26-HRP-2
Published on

ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ಹಾಗೂ ಹಾಲಮ್ಮ ದೇವಿಯರ ಯುಗಾದಿ ಹಬ್ಬದ ಪ್ರಯುಕ್ತ ಮಾ.24 ಮತ್ತು 25ರಂದು ಆಯೋಜಿಸಿದ್ದ ಕುಸ್ತಿ ಸ್ಪರ್ಧೆಯಲ್ಲಿ ಎಚ್. ತಿಪ್ಪೇಶ್ ಪ್ರಥಮ ಸ್ಥಾನ ಪಡೆದು, ಅರ್ಧ ಕೆ.ಜಿ. ತೂಕದ ಬೆಳ್ಳಿಗದೆ, 15 ಸಾವಿರ ರೂ. ಬಹುಮಾನ ತಮ್ಮದಾಗಿಸಿಕೊಂಡರು.

ಇವರು ಶಿವಮೊಗ್ಗದ ಸಂಜು ಅವರನ್ನು ಮಣಿಸಿ, ಈ ಬಹುಮಾನ ಪಡೆದರು. ಕಾಳಗದಲ್ಲಿ 300ಕ್ಕೂ ಹೆಚ್ಚು ಪೈಲ್ವಾನರು ಭಾಗವಹಿಸಿದ್ದರು. ಊರಿನ ಮುಖಂಡರಾದ ಎಸ್. ಹನುಮಂತಪ್ಪ, ಭರಮಪ್ಪ, ಕೆಂಚಪ್ಪ, ಕುಬೇರಪ್ಪ, ಎಚ್. ಸಿದ್ದಪ್ಪ, ರೇವಣಸಿದ್ಧಪ್ಪ, ಗ್ರಾಪಂ ಸದಸ್ಯರಾದ ಪಿ.ಹಾಲೇಶ್, ಕೆ.ಅಜ್ಜಪ್ಪ, ಮಡ್ರಳ್ಳಿ ಕೆಂಚಪ್ಪ, ಯುವರಾಜ್, ಸಂಜು, ಚಂದ್ರಪ್ಪ,ಬಾಲಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net