ಟ್ರ್ಯಾಕ್ಟರ್ ಗಾಲಿ ಹರಿದು ವ್ಯಕ್ತಿ ಸಾವು

Accident
Published on

ಹರಪನಹಳ್ಳಿ : ವ್ಯಕ್ತಿಯ ತಲೆ ಮೇಲೆ ಟ್ರ್ಯಾಕ್ಟರ್ ಗಾಲಿ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ರೈಲ್ವೆ ಸ್ಟೇಷನ್ ಸಮೀಪ ಇಂದು ಬೆಳಗ್ಗೆ ನಡೆದಿದೆ.

ಪಟ್ಟಣದ ವಾಲ್ಮೀಕಿ ನಗರದ ನಿವಾಸಿ ಕೆಂಚಪ್ಪ (35) ಮೃತ ದುರ್ದೈವಿ. ಬೆಳಿಗ್ಗೆ ತಮ್ಮ ಜಮೀನಿನಲ್ಲಿ ಮೆಕ್ಕೆಜೋಳದ ತೆನೆಯನ್ನು ಟ್ರ್ಯಾಕ್ಟರ್ ನಲ್ಲಿ ತರುತ್ತಿದ್ದ ವೇಳೆ ಘಟನೆ ನಡೆದಿದೆ.

ಇಂಜಿನ್ ಹಿಂಬದಿಯ ಉಕ್ಕಿನ ಮೇಲೆ ನಿಂತಿದ್ದ ಕೆಂಚಪ್ಪ, ಹದಗೆಟ್ಟ ಮಣ್ಣಿನ ರಸ್ತೆಯಲ್ಲಿ ಆಯತಪ್ಪಿ‌ ಟ್ರ್ಯಾಕ್ಟರ್ ಟ್ರ್ಯಾಲಿಯ ಎಡಗಾಲಿಗೆ ಬಿದ್ದು ತಲೆ ಸಿಕ್ಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಇಲ್ಲಿನ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net