

ಹರಪನಹಳ್ಳಿ: ತಾಲೂಕಿನ ಬೇವಿನಹಳ್ಳಿ ಸಣ್ಣ ತಾಂಡಾದ ಹಳ್ಳದ ಬಳಿ ಹೊಂಗೆ ಮರಕ್ಕೆ ಮಹಿಳೆ ನೇಣು ಬಿಗಿದುಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ತಾಂಡಾದ ನಿವಾಸಿ ಸುನೀತಾ ಬಾಯಿ (42) ಮೃತ ಮಹಿಳೆ. ಮಹಿಳೆ ಏ.7 ರಂದು ಮನೆ ಬಿಟ್ಟು ಹೋಗಿದ್ದು, ಮರಳಿ ಬಂದಿರಲಿಲ್ಲ. ಬುಧವಾರ ಬೆಳಗ್ಗೆ ತಾಂಡಾದ ಹೊರವಲಯದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.