ಸಾಲ ತೀರಿಸಲಾಗದೆ ವೃದ್ಧೆ ಆತ್ಮಹತ್ಯೆ

suicide
Published on

ಹರಪನಹಳ್ಳಿ: ಸಾಲ ತೀರಿಸಲಾಗದೆ ಮನನೊಂದು ಪಟ್ಟಣದ ವೃದ್ಧೆ ಮನೆಯಲ್ಲಿದ್ದ ವಿಷದ ಮಾತ್ರೆ ಸೇವಿಸಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಣಗಾರಗೇರಿ ಗೀತಮ್ಮ (65) ಮೃತ ವೃದ್ಧೆ. ಮಗಳ ವಿವಾಹ ಮಾಡಿಕೊಟ್ಟ ವೃದ್ಧೆ, ಮನೆಯಲ್ಲಿ ಒಬ್ಬಳೇ ವಾಸವಿದ್ದಳು. ಊಟ ನಿದ್ದೆ ಸರಿಯಾಗಿ ಮಾಡುತ್ತಿರಲಿಲ್ಲ. ಅಲ್ಲದೆ ವೈಯಕ್ತಿಕವಾಗಿ ಮಾಡಿಕೊಂಡ ಕೈಗಡ ಸಾಲ ಮಾಡಿದ್ದಳು. ಅದನ್ನು ಮರಳಿ ನೀಡಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net