ಅಗ್ನಿಕುಂಡ ಹಾಯ್ದು ಭಕ್ತಿ ಸಮರ್ಪಣೆ

101122 Harapanahalli Veerabhadreshwara Agnikunda
ಹರಪನಹಳ್ಳಿಯಲ್ಲಿ ಶ್ರೀ ವೀರಭಧ್ರೇಶ್ವರ ಅಗ್ನಿ ಕುಂಡದಲ್ಲಿ ಭಕ್ತರು ಹಾಯ್ದು ಭಕ್ತಿ ಸಮರ್ಪಿಸಿದರು.
Published on

ಹರಪನಹಳ್ಳಿ: ಪಟ್ಟಣದ ಹಳೇ ಬಸ್ ನಿಲ್ದಾಣದ ಸಾರಿ ಬಯಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಅಗ್ನಿಕುಂಡ ಹಾಯುವ ಕಾರ್ಯಕ್ರಮ ಜರುಗಿತು.

ಮೇಗಳಪೇಟೆ ಗುಗ್ಗಳ ವೀರಭದ್ರೇಶ್ವರ ದೇವಸ್ಥಾನದಿಂದ ಹೂವಿನ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯೊಂದಿಗೆ ಸಮಾಳ, ನಂದಿಕೋಲು ಸೇರಿದಂತೆ ಸಕಲ ವಾದ್ಯಗಳೊಂದಿಗೆ ಹಳೆಯ ಬಸ್ ನಿಲ್ದಾಣದ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ಬಳಿಕ ಹಿರೇಕೆರೆಗೆ ತೆರಳಿ ಗಂಗೆ ಪೂಜೆ ನೇರವೇರಿಸಲಾಯಿತು. ನೂರಾರು ಭಕ್ತರು ಅಗ್ನಿಕುಂಡದ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು. ವೀರಭದ್ರಸ್ವಾಮಿಗೆ ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗಿತ್ತು.

ಶಾಸಕ ಜಿ.ಕರುಣಾಕರರೆಡ್ಡಿ ದೇವರ ದರ್ಶನ ಪಡೆದರು. ಧರ್ಮಕರ್ತ ಪಾಟೀಲ್ ಪ್ರವೀಣ ಕುಮಾರ, ಪ್ರಧಾನ ಅರ್ಚಕರಾದ ವೀರಮಲ್ಲಪ್ಪ ಪೂಜಾರ, ಪೂಜಾರ ಷಣ್ಮುಖಪ್ಪ, ಅರ್ಚಕರಾದ ಚಂದ್ರಶೇಖರ ಪೂಜಾರ, ಶಶಿಧರ ಪೂಜಾರ, ಪಿ.ಬಿ.ಗೌಡ, ವಾಗೀಶ ಪೂಜಾರ, ಗುರುಪಾದ ಸ್ವಾಮಿ, ದಂಡ್ಯೆಪ್ಪನವರ ವೀರಭದ್ರಪ್ಪ, ಪಾಟೀಲ ಬೆಟ್ಟನಗೌಡ್ರು, ಗೊಂಗಡಿ ಯಜಮಾನ ವರುಣ, ಕೊಟ್ರೇಶ್, ವೀರಭದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net