ಶ್ರೀ ಚನ್ನಬಸವ ಶಿವಯೋಗಿಗಳ ಸ್ಮರಣೋತ್ಸವ ಇಂದಿನಿಂದ

Harapanahalli Gurubasavasri
ಡಾ.ಗುರುಬಸವ ಶ್ರೀಗಳು
Published on

ಹರಪನಹಳ್ಳಿ: ತಾಲೂಕಿನ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಸೆ.25 ಹಾಗೂ 26ರಂದು ಶ್ರೀ ಚನ್ನಬಸವ ಶಿವಯೋಗಿಗಳ ಸ್ಮರಣೋತ್ಸವ ಹಾಗೂ ಬಸವ ತತ್ವ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಕಮ್ಮತ್ತಹಳ್ಳಿ-ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಶ್ರೀಗಳ ಅಧ್ಯಕ್ಷತೆಯಲ್ಲಿ ಎರಡು ದಿನ ಕಾರ್ಯಕ್ರಮ ನಡೆಯಲಿದೆ. ಸೆ.25ರಂದು ಧ್ವಜಾರೋಹಣ, ಜಾನಪದ ಕಲಾ ತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ, ಸಂಜೆ 6ಕ್ಕೆ ಬಸವ ತತ್ವ ಸಮ್ಮೇಳನ ಜರುಗಲಿದೆ.

ಸಮ್ಮೇಳನದಲ್ಲಿ ಹೆಬ್ಬಾಳು ವಿರಕ್ತಮಠ ಮಹಾಂತ ರುದ್ರೇಶ್ವರ ಸ್ವಾಮೀಜಿ, ಕೊಟ್ಟೂರು ಜಗದ್ಗುರು ಸೋಮಶಂಕರ ಸ್ವಾಮೀಜಿ, ಚಿತ್ರದುರ್ಗ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ, ಜಯಬಸವಾನಂದ ಸ್ವಾಮೀಜಿ, ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಡಾ.ಜಿ.ವಿ.ಮಂಜುನಾಥ್, ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಎಚ್.ಪಿ.ರಾಜೇಶ್, ಜಿ.ನಂಜನಗೌಡ್ರು, ಮಂಜುನಾಥ್, ಕೆಂಚನಗೌಡ್ರು, ಬಿ. ಮಹೇಶ್, ಡಾ.ಎಚ್. ಕೆ.ರುದ್ರೇಶ್ ಇತರರು ಭಾಗವಹಿಸುವರು.

ಎಸ್ಸೆಸ್ಸೆಲ್ಸಿ-ಪಿಯುನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ. ಸೆ.26ರಂದು ಬೆಳಗ್ಗೆ ಸಾಣೇಹಳ್ಳಿ ಡಾ.ಪಂಡಿತಾರಾಧ್ಯಾ ಶಿವಾಚಾರ್ಯರ ನೇತೃತ್ವದಲ್ಲಿ ಬಸವ ತತ್ವ ಸಮ್ಮೇಳನ ಜರುಗಲಿದೆ. ರುದ್ರಮುನಿ ಸ್ವಾಮೀಜಿ, ಡಾ.ಹಿರೇಶಾಂತವೀರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ್, ಶಶಿಧರ್ ಕರವೀರಶೆಟ್ರು, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ, ಶಾಂತನಗೌಡ್ರು, ಬಸವರಾಜ್ ವಿ.ಶಿವಗಂಗಾ, ಕೆ.ಎಸ್. ಬಸವಂತಪ್ಪ, ಸನ್ನಿ ಆರ್. ರಾಜಮನೆ ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net