ಏಳನೇ ವೇತನ ಆಯೋಗದ ವರದಿ ಪರಿಷ್ಕರಿಸಿ

Harapanahalli Govt exempl
ಹರಪನಹಳ್ಳಿಯಲ್ಲಿ ಉಪ ತಹಸೀಲ್ದಾರ್ ನಟರಾಜ್‌ಗೆ ನಿವೃತ್ತ ಸರ್ಕಾರಿ ನೌಕರರ ಸಂಘ ಮನವಿ ಸಲ್ಲಿಸಿತು. ಪ್ರಮುಖರಾದ ಶಿವಾನಂದಪ್ಪ ಕೌಟಿ, ಮೂರ್ತಿ ನಾಯ್ಕ, ದೇವೇಂದ್ರಗೌಡ, ತಿಪ್ಪೇರುದ್ದಪ್ಪ, ಕೊಟ್ರಪ್ಪ, ಬಿ.ಶೇಖರಪ್ಪ ಇತರರಿದ್ದರು.
Published on

ಹರಪನಹಳ್ಳಿ: ರಾಜ್ಯ ಸರ್ಕಾರವು ಏಳನೇ ವೇತನ ಆಯೋಗದ ವರದಿ ಜಾರಿಯಲ್ಲಿ ತಾರತಮ್ಯ ಎಸಗಿದೆ ಎಂದು ಆರೋಪಿಸಿ ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಉಪ ತಹಸೀಲ್ದಾರ್ ನಟರಾಜ್‌ಗೆ ಮನವಿ ಸಲ್ಲಿಸಿತು.

ಸಂಘದ ತಾಲೂಕು ಅಧ್ಯಕ್ಷ ಶೇಖರಗೌಡ ಪಾಟೀಲ್ ಮಾತನಾಡಿ, ನಿವೃತ್ತ ನೌಕರರಿಗೆ ಆರ್ಥಿಕ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಆದ್ದರಿಂದ ಆಯೋಗದ ವರದಿಯನ್ನು ಪರಿಷ್ಕರಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಸಿದ್ದಲಿಂಗನಗೌಡ ಮಾತನಾಡಿ, ಸರ್ಕಾರ ಆಯೋಗದ ವರದಿ ಮರು ಪರಿಶೀಲನೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net