ವಿದ್ಯಾರ್ಥಿಗಳಿಗೆ ದೂರದೃಷ್ಟಿಯ ಶಿಕ್ಷಣ ಅಗತ್ಯ

Untitled design(5)
ಹರಪನಹಳ್ಳಿ ತಾಲೂಕಿನ ಯಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆಯನ್ನು ವಿತರಿಸಲಾಯಿತು. ಶಿಕ್ಷಕರಾದ ಕುಮಾರಪ್ಪ ಕೆ.ವಿ, ಕರಿಬಸಪ್ಪ ಕೆ.ಎಚ್, ಗೀತಾ ನಡುವಿನಮನಿ, ಸುನೀತಾ ಕೆ., ಶೇಖರ್ ನಾಯ್ಕ, ಸುಮಾ ಎ., ಗೀತಾ ಬಿ., ಶರತ್ ಬಾಬು ಇತರರಿದ್ದರು.
Published on

ರಪನಹಳ್ಳಿ: ದೇಶದಲ್ಲಿ ಸರ್ಕಾರಿ ಹುದ್ದೆಗಳಿಗಾಗಿ ಸ್ಪರ್ಧಾತ್ಮಕತೆ ಹೆಚ್ಚಿದೆ. ಹಾಗಾಗಿ ದೂರದೃಷ್ಟಿಯ ಶಿಕ್ಷಣವನ್ನು ಮಕ್ಕಳಲ್ಲಿ ಮೂಡಿಸುವುದು ಅಗತ್ಯವಿದೆ ಎಂದು ಹರಪನಹಳ್ಳಿ ತಾಲೂಕಿನ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಸುಬ್ಬಣ್ಣ ತಿಳಿಸಿದರು.
ತಾಲೂಕಿನ ಯಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆಯ 75 ಪ್ರತಿಗಳನ್ನು ಬುಧವಾರ ಮಕ್ಕಳಿಗೆ ವಿತರಿಸಿ ಮಾತನಾಡಿದರು.

ಪಠ್ಯ ವಿಷಯಗಳ ಬಗ್ಗೆ ಮಾತ್ರ ಭೋದನೆ ಮಾಡಿದರೆ ಸಾಲದು. ಜಗತ್ತಿನಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳುವ ಅವಶ್ಯವಿದೆ. ಜಾಗತಿಕವಾಗಿ, ತಂತ್ರಜ್ಞಾನದಲ್ಲಿ ದೇಶವು ಮುಂದುವರಿದ ದೇಶಗಳಿಗೆ ಸಾಲುಗಳಲ್ಲಿ ಬೆಳೆದು ನಿಂತಿದೆ. ಅದಕ್ಕೆ ದೂರದೃಷ್ಟಿಯ ಶಿಕ್ಷಣದಿಂದ ಸಾಧ್ಯವಾಗಿದೆ. ಹಾಗಾಗಿ ನೀವು ಶಾಲಾ ದಿನಗಳಲ್ಲಿ ಜಗತ್ತಿನ ವಿದ್ಯಮಾನಗಳ ಆಲಿಸಬೇಕೆಂದರೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆಯನ್ನು ಪ್ರತಿನಿತ್ಯ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net