

ಹರಪನಹಳ್ಳಿ: ಕಾಮಗಾರಿ ಪ್ರಾರಂಭವಾಗಿ 2 ವರ್ಷವಾದರೂ ಏಕೆ ಪೂರ್ಣಗೊಳಿಸಿಲ್ಲ ಎಂದು ಸಂಸದ ವೈ.ದೇವೇಂದ್ರಪ್ಪ ಶನಿವಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅರಸೀಕೆರೆ ಗ್ರಾಮದಲ್ಲಿ ಬಸ್ ನಿಲ್ದಾಣ, ಜೆಸ್ಕಾಂ ಆಫೀಸ್, ರಸ್ತೆ ವಿಸ್ತರಣೆ, ಅರಸೀಕೆರೆ - ಉಚ್ಚಂಗಿದುರ್ಗ ರಸ್ತೆ ಮಧ್ಯದಲ್ಲಿರುವ ಸೇತುವೆ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಅರಸೀಕೆರೆ - ಉಚ್ಚಂಗಿದುರ್ಗ ರಸ್ತೆ ಮಧ್ಯದಲ್ಲಿರುವ ಸೇತುವೆ ಕುಸಿದಿದೆ.
ಇದನ್ನೂ ಓದಿ: ಮುಖ್ಯರಸ್ತೆ ವಿಸ್ತರಣೆ ವಿಳಂಬವಾದರೆ ಹೋರಾಟ
ರಸ್ತೆ ವಿಸ್ತರಣೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ ವಾಗಿದೆ. ಕೂಡಲೇ ಸರಿಪಡಿಸಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಗ್ರಾಪಂ ಅಧ್ಯಕ್ಷ ಎ. ಇನಾಯತ್ ವುಲ್ಲಾ, ಮುಖಂಡರಾದ ಪೂಜಾರ್ ಮರಿಯಪ್ಪ, ಎ.ಮಹಾಬ್ದುಲ್ ಸಾಹೇಬ್,ಎ.ಎಚ್. ಪಂಪಣ್ಣ, ವೈ.ಟಿ. ಕೊಟ್ರೇಶ್, ಬಷೀರ್ ಸಾಹೇಬ್, ಮುನ್ನ ಸಾಹೇಬ್, ವೆಂಕೋಬ ಶೆಟ್ರು, ಇಂಜಿನಿಯರ್‌ಗಳಾದ ನಾಗರಾಜ್, ನಿರಂಜನ್, ನಸರುಲ್ಲಾ ಇದ್ದರು.