

ಹರಪನಹಳ್ಳಿ: ಪಟ್ಟಣದ ಮೇಗಳ ಉಪ್ಪಾರಗೇರಿಯ ದನದ ಕೊಟ್ಟಿಗೆಯಲ್ಲಿ ಗುರುವಾರ ತಡರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ಅವಘಡ ಸಂಭವಿಸಿ ಎಂಟು ಜಾನುವಾರುಗಳು ಸತ್ತಿವೆ.
ಗೌಳಿ ನಾಗಪ್ಪ ಅವರ ಎರಡು ಆಕಳು ಹಾಗೂ ಆರು ಎಮ್ಮೆ, ಕರುಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಪಿಎಸ್‌ಐ ಶಾಂತಮೂರ್ತಿ, ಪಶು ಇಲಾಖೆ ಸಹಾಯಕ ನಿರ್ದೆಶಕ ಶಿವಕುಮಾರ, ಪುರಸಭೆ ಸದಸ್ಯ ಗೌಳಿ ವಿನಾಯಕ, ಕಾಂಗ್ರೆಸ್ ಮುಖಂಡರಾದ ಆಲದಹಳ್ಳಿ ಷಣ್ಮುಖಪ್ಪ, ಶಶಿಧರ ಪೂಜಾರ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.