

ಹರಪನಹಳ್ಳಿ: ತಾಲೂಕಿನ ನೀಲಗುಂದ ಗ್ರಾಮ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು.
ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಟಿ.ಅನ್ನಪೂರ್ಣಮ್ಮ ಹಾಗೂ ಸಾಮಾನ್ಯ ಕ್ಷೇತ್ರದ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಹನುಮಂತಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಜಿ.ಹರೀಶ ಘೋಷಿಸಿದರು.
ಇದನ್ನೂ ಓದಿ:
ಒಟ್ಟು 23 ಸದಸ್ಯರ ಪೈಕಿ 19 ಸದಸ್ಯರು ಹಾಜರಾಗಿದ್ದು, ನಾಲ್ವರು ಗೈರಾಗಿದ್ದರು. ಟಿ.ಅಂಜಿನಪ್ಪ, ಬಿ.ವಾಗೀಶ, ವಿಜಯಪ್ಪ, ಬೇಲೂರು ಸಿದ್ದೇಶ, ಸೂರ್ಯನಾಯ್ಕ, ಟಿ.ಮನೋಜ್, ಎಂ.ಮಲ್ಲೇಶ, ನಾಗರಾಜ ಪಾಟೀಲ್, ಟಿ.ತಿಮ್ಮೇಶ, ಭೋವಿ ಮಹಾಂತೇಶ್ ಇತರರಿದ್ದರು.
ನಿಚ್ಚವ್ವನಹಳ್ಳಿ ಪಂಚಾಯಿತಿ ಅಧ್ಯಕ್ಷರಾಗಿ ಆನಂದಪ್ಪ ಕಂಚಿಕೆರೆ, ಉಪಾಧ್ಯಕ್ಷರಾಗಿ ಗಂಗೀಬಾಯಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಆನಂದಪ್ಪ ಕಂಚಿಕೆರೆ ಹಾಗೂ ಕೆ. ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಒಟ್ಟು 14 ಸದಸ್ಯರಲ್ಲಿ ಆನಂದಪ್ಪ ಕಂಚಿಕೆರೆಗೆ 8, ಕೆ. ಮಂಜುನಾಥ್‌ಗೆ 6 ಮತಗಳು ಲಭಿಸಿದ್ದರಿಂದ ಆನಂದಪ್ಪ ಕಂಚಿಕೆರೆ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದ ಗಂಗೀಬಾಯಿ 8 ಹಾಗೂ ಶಾರದಾ 6 ಮತ ಪಡೆದರು. 8 ವೋಟ್ ಪಡೆದು ಗಂಗೀಬಾಯಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಿ.ರೇಣುಕಾದೇವಿ ಘೋಷಿಸಿದರು. ಪ್ರಮುಖರಾದ ಕೆ.ಪರುಶುರಾಮಪ್ಪ, ಟಿ. ಶೇಖರಪ್ಪ, ಕೃಷ್ಣಪ್ಪ, ಸುರೇಶ್, ಶಾಂತಕುಮಾರ್, ಮಲ್ಲೇಶ್ ನಾಯ್ಕ, ಲಿಂಗಣ್ಣ, ರಾಜು, ಹನುಮಂತಪ್ಪ, ಕೆಂಚಪ್ಪ, ಪಿಡಿಒ ಮುಕ್ತಾರಲಿ ಇತರರಿದ್ದರು.
ಅರಸೀಕೆರೆ ಹೋಬಳಿಯ ಪುಣಭಗಟ್ಟ ಗ್ರಾಪಂ ಅಧ್ಯಕ್ಷೆಯಾಗಿ ಬಸಮ್ಮ ಕಲ್ಲಳ್ಳಿ ಹನುಮಂತಪ್ಪ ಹಾಗೂ ಉಪಾಧ್ಯಕ್ಷರಾಗಿ ಪಾರ್ವತಿಬಾಯಿ ಗುರುವಾರ ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಶಿಕ್ಷಣ ಇಲಾಖೆ ಅಧಿಕಾರಿ ಎಲ್.ಆರ್.ಜಯರಾಜ್ ಕಾರ್ಯನಿರ್ವಹಿಸಿದರು.
ಸಹಾಯಕ ಚುನಾವಣಾ ಅಧಿಕಾರಿ ಕಬೀರ ನಾಯ್ಕ, ಪಿಡಿಒ ಮಂಜುನಾಥ್, ಮುಖಂಡ ಕಲ್ಲಳ್ಳಿ ಹನುಮಂತಪ್ಪ, ಯಶವಂತ ಗೌಡ, ಎಸ್.ಮಂಜುನಾಥ್, ಮಹಾದೇವಪ್ಪ, ಬಸಣ್ಣ, ಪರಮೇಶ್ವರಪ್ಪ, ನಟರಾಜ್ ಪಾಟೀಲ್, ಬಸವರಾಜ್, ಅಶೋಕ, ಪತಿನಾಯ್ಕ, ರಾಜಣ್ಣ, ನಾಗರಾಜ್, ರಂಗಪ್ಪ ಇದ್ದರು.