ಮೋದಿ ಆಡಳಿತದಿಂದ ದೇಶದ ಆರ್ಥಿಕ ಪ್ರಗತಿ

Nitturu
ಹರಪನಹಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ಜಾಕ್‌ವೆಲ್ ಬಳಿ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ ಲೋಕಾರ್ಪಣೆ ಮಾಡಿದರು.
Published on

ಹರಪನಹಳ್ಳಿ: ದೇಶದಲ್ಲಿ ಆರ್ಥಿಕ ಪ್ರಗತಿ ಚೇತರಿಕೆಯೊಂದಿಗೆ ಬಿಜೆಪಿ ಸರ್ಕಾರದ ಜನಪರ ಯೋಜನೆಗಳಿಂದ ಪ್ರಧಾನಿ ನರೇಂದ್ರ ಮೋದಿ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದು ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದರು.

ತಾಲೂಕಿನ ನಿಟ್ಟೂರು ಗ್ರಾಮದಲ್ಲಿ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆರೆಗಳ ನೀರು ತುಂಬಿಸುವ ಯೋಜನೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ಮಹತ್ವಪೂರ್ಣಯೋಜನೆ ಸಾಕಾರಗೊಂಡಿದೆ. ಸೆಪ್ಟೆಂಬರ್ ಒಳಗೆ ಹರಪನಹಳ್ಳಿ ತಾಲೂಕಿನ ಎಲ್ಲ ಕೆರೆಗಳು ಭರ್ತಿಯಾಗಲಿವೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ನೀಡಿದ್ದರಿಂದ ಪಕ್ಷದ ಕಾರ್ಯಕರ್ತರ ಉತ್ಸಾಹ ಹೆಚ್ಚಿದೆ. 150 ಕ್ಷೇತ್ರ ಗೆಲ್ಲಲು ಮೋದಿ ಪಣ ತೊಟ್ಟಿದ್ದಾರೆ. ರಾಜ್ಯಕ್ಕೆ ಮತ್ತೆ ಭೇಟಿ ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ಒದಗಿಸಿ ಎಲ್ಲ ವರ್ಗದವರ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ದಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಎಲ್ಲ ಕಡೆ ಗ್ಯಾರಂಟಿ ಕಾರ್ಡಿನ ಬೋರ್ಡ್ ಹಾಕುತ್ತಿದ್ದು, ಜನರಿಗೆ ತಲುಪಿಸುವ ಗ್ಯಾರಂಟಿ ಇಲ್ಲದೇ ಸುಳ್ಳನ್ನು ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ ಎಂದರು.

ಶಾಸಕ ಜಿ.ಕರುಣಾಕರ ರೆಡ್ಡಿ ಮಾತನಾಡಿ, ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ. ಕಾಂಗ್ರೆಸ್‌ನವರು ಇದನ್ನು ತಮ್ಮ ಯೋಜನೆ ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಕೆರೆಗೆ ನೀರು ತುಂಬಿಸದೇ ಐದು ವರ್ಷ ಕಾಲಹರಣ ಮಾಡಿ 10 ಕೆರೆಗಳನ್ನು ಕಡಿತಗೊಳಿಸಿದರು. ಕೆರೆ ನೀರು ತುಂಬಿಸಲು ಪುನಃ ನಾವೇ ಅಧಿಕಾರಕ್ಕೆ ಬರಬೇಕಾಯಿತು ಎಂದರು.

ಪುರಸಭೆ ಅಧ್ಯಕ್ಷ ಎಚ್.ಅಶೋಕ್, ಉಪ ವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಡಿವೈಎಸ್ಪಿ ಹಾಲಮೂರ್ತಿರಾವ್, ಮಾಜಿ ದೂಡ ಅಧ್ಯಕ್ಷ ಶಿವಕುಮಾರ್ ದೇವರಮನೆ, ಗ್ರಾಪಂ ಅಧ್ಯಕ್ಷೆ ನಾಗಮ್ಮ, ಬಾಗಳಿ ಕೊಟ್ರೇಶ್, ಕಲ್ಲೇರ ಬಸವರಾಜ, ಎಚ್.ಟಿ ಗಿರೀಶ್, ಎಲ್.ಟಿ ಕಂಪನಿ ಸುಬ್ಬಾರೆಡ್ಡಿ, ನೀರಾವರಿ ನಿಗಮದ ಆರ್.ವಿ.ಮಂಜುನಾಥ, ಎನ್.ಸುಜಾತ, ಕಾರ್ಯಪಾಲಕ ಬಸವರಾಜ, ಎನ್.ಜಿ.ಗಂಗಪ್ಪ, ಆರ್.ಲೋಕೇಶ, ಗ್ರಾಪಂ ಮಾಜಿ ಅಧ್ಯಕ್ಷ ಎಂ. ದ್ಯಾಮಪ್ಪ, ಪ್ರಮುಖರಾ ಹನುಮಂತ, ಶಿವಾನಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net