ವಸತಿ ಶಾಲೆಗಳಿಗೆ ಶಾಸಕಿ ಎಂ.ಪಿ.ಲತಾ ಭೇಟಿ, ಮೂಲ ಸೌಲಭ್ಯ ಪರಿಶೀಲನೆ

MLA
ಹರಪನಹಳ್ಳಿ ತಾಲೂಕಿನ ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ, ಪ್ರಾಚಾರ್ಯ ನಾಗರಾಜ ಇದ್ದರು.
Published on

ಹರಪನಹಳ್ಳಿ: ತಾಲೂಕಿನ ಮಾಚಿಹಳ್ಳಿ ಬಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಸೋಮವಾರ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ವಸತಿ ನಿಲಯದಲ್ಲಿ ಮಕ್ಕಳಿಗೆ ನೀಡುವ ಆಹಾರ ಹಾಗೂ ಮೂಲ ಸೌಕರ್ಯ ಪರಿಶೀಲಿಸಿದರು. ಸಂಜೆ ಹಲುವಾಗಲು ಬಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ನಿಲಯಕ್ಕೆ ಭೇಟಿ ನೀಡಿ ಆಹಾರ ಧಾನ್ಯ ಪರಿಶೀಲಿಸಿ ನಂತರ ಮಕ್ಕಳ ಕುಂದು-ಕೊರತೆ ಆಲಿಸಿದರು.

ಮಕ್ಕಳಿಗೆ ಕುಡಿವ ನೀರು, ಊಟದಲ್ಲಿ ಯಾವದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ, ಪ್ರಾಚಾರ್ಯ ನಾಗರಾಜ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net