ಕಾಂಗ್ರೆಸಿನವರು ಕಣ್ಣಿದ್ದೂ ಕುರುಡರು

17092022 Harapanahalli Bhoomi Puja
Published on

ಹರಪನಹಳ್ಳಿ: ನಾನು ಯಾರನ್ನೂ ಟೀಕೆ ಮಾಡುವುದಿಲ್ಲ, ಇತ್ತೀಚೆಗೆ ಕಾಂಗ್ರೆಸ್‌ನವರದು ಟೀಕೆ ಹೆಚ್ಚಾಗಿದೆ. ಕಣ್ಣಿದ್ದೂ ಕುರುಡರು, ಕಿವಿ ಇದ್ದರೂ ಕಿವುಡರು ಆಗಿದ್ದಾರೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.

ಬಾಗಳಿ ಕಲ್ಲೇಶ್ವರ ದೇವಸ್ಥಾನದಿಂದ ಕೋಡಿಹಳ್ಳಿ ಕ್ಯಾಂಪ್‌ವರೆಗಿನ 1.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಬಿವೃದ್ಧಿ,ನಂದಿಬೇವೂರುನಿಂದ ಅಡವಿಮಲ್ಲನಕೇರಿ ರಸ್ತೆ ಅಭಿವೃದ್ಧಿಗೆ 4.50 ಕೋಟಿ ರೂ.ವೆಚ್ಚದಲ್ಲಿ ಸುಮಾರು 3.60 ಕಿ.ಮೀ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದರು.

ಕಾಂಗ್ರೆಸ್ ಮುಖಂಡರು ಆಧಾರವಿಲ್ಲದೆ ಆರೋಪಗಳನ್ನು ಮಾಡುತ್ತಾ ಬರುತ್ತಿದ್ದಾರೆ ಎಂದು ಆರೋಪಿಸಿದರು. ಗ್ರಾಪಂ ಪ್ರಭಾರ ಅಧ್ಯಕ್ಷೆ ಲಕ್ಷ್ಮೀ ಚಂದ್ರಶೇಖರ್, ಹಿರಿಯ ಮುಖಂಡ ಕೊಟ್ರಬಸಪ್ಪ, ಸುರೇಶ್‌ಶಾಸ್ತ್ರಿ, ಕಣವಿಹಳ್ಳಿ ಮಂಜುನಾಥ ಮಾತನಾಡಿದರು. ಸದಸ್ಯರಾದ ಅಕ್ಕಮ್ಮ, ಚನ್ನಮಲ್ಲಿಕಾರ್ಜುನ್, ಗುತ್ತಿಗೆದಾರರಾದ ಬಿ.ಮಂಜುನಾಥ, ಬಿ.ಸಂಪತ್‌ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಅಶೋಕ್, ಯು.ಕೆ ಗುರುಬಸವರಾಜ್, ಡಿ.ರಾಜಪ್ಪ, ಚಿಗಟೇರಿ ನಾರಪ್ಪ, ಎ.ಮಂಜುನಾಥ, ಮಲ್ಲಪ್ಪ, ಮುಖಂಡರಾದ ಆರ್.ಲೋಕೇಶ್, ಬಾಗಳಿ ಕೊಟ್ರೇಶಪ್ಪ, ಎಂ.ಮಲ್ಲೇಶ್, ಯು.ಪಿ.ನಾಗರಾಜ, ವಕೀಲರಾದ ಪ್ರಕಾಶ್, ರೇವಣಸಿದ್ದಪ್ಪ, ಶಿವಾನಂದ್, ಪಾಲಾಕ್ಷಪ್ಪ, ರಾಮನಗೌಡ, ಸೇರಿದಂತೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net