ಪಕ್ಷದ ಚಟುವಟಿಕೆಗಳಿಗೆ ಕಚೇರಿ ಉಪಯೋಗವಾಗಲಿ; ಶಾಸಕ ಜಿ.ಕರುಣಾಕರರೆಡ್ಡಿ ಸಲಹೆ

26092022 Harapanahalli bjp new office open
Published on

ಹರಪನಹಳ್ಳಿ: ಪಟ್ಟಣದ ಗುಡಿಕೇರಿಯಲ್ಲಿ ಸೋಮವಾರ ಭಾರತೀಯ ಜನತಾ ಪಕ್ಷದ ನೂತನ ಕಚೇರಿಯನ್ನು ಶಾಸಕ ಜಿ. ಕರುಣಾಕರರೆಡ್ಡಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಪೂರ್ಣ ಪ್ರಮಾಣದಲ್ಲಿ ಪಕ್ಷದ ಕಾರ್ಯಚಟುವಟಿಕೆಗಳು ನಡೆಯಲಿಕ್ಕೆ ನೂತನ ಕಚೇರಿ ತೆರೆಯಲಾಗಿದೆ. ಮುಂಬರುವ ಎಲ್ಲ ಚುನಾವಣೆ ಕೆಲಸಗಳು ಈ ಕಚೇರಿಯಲ್ಲಿ ನಡೆಯಲಿವೆ. ಈ ಮೂಲಕ ಕಾರ್ಯಕರ್ತರು, ಮುಖಂಡರು ತಮ್ಮ ಕಾರ್ಯಕ್ರಮಗಳನ್ನು ಮಾಡಿಕೊಳ್ಳಲು ಅನುಕೂಲವಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಮಾತನಾಡಿ, ಕಚೇರಿಯ ಸದುಪಯೋಗ ಪಡೆದು ಪಕ್ಷವನ್ನು ಬಲಪಡಿಸಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ನೂತನ ಕಚೇರಿಯನ್ನು ಗಣಪತಿ ಪೂಜೆಯೊಂದಿಗೆ ಆರಂಭಿಸಲಾಯಿತು. ಪಕ್ಷದ ಮುಖಂಡರು ಭಾರತಾಂಭೆಗೆ ಪುಷ್ಪನಮನ ಸಲ್ಲಿಸಿದರು. ಪುರಸಭೆ ಅಧ್ಯಕ್ಷ ಎಚ್.ಎಂ. ಅಶೋಕ, ಸದಸ್ಯರಾದ ಮಂಜುನಾಥ ಇಜಾಂತಕರ, ಗೌಳಿ ವಿನಯ, ಕಿರಣ್ ಶ್ಯಾನಬಾಗ್, ಜಾವೀದ್, ಬಳ್ಳಾರಿ ಜಿಲ್ಲಾ ಪ್ರಭಾರಿ ಸಿದ್ದೇಶ್ ಯಾದವ್, ತಾಲೂಕು ಮಂಡಲ ಅಧ್ಯಕ್ಷ ಸತ್ತೂರು ಹಾಲೇಶ್, ಮುಖಂಡರಾದ ಜಿ.ನಂಜನಗೌಡ, ಅರುಂಡಿ ನಾಗರಾಜ, ನಾಗರಾಜಭಟ್, ಜಿಲ್ಲಾಧ್ಯಕ್ಷೆ ಸುವರ್ಣಾ ನಾಗರಾಜ, ಎಂ.ಪಿ. ನಾಯ್ಕ, ಕಲ್ಲೇರ ಬಸವರಾಜಪ್ಪ, ವಿಷ್ಣುರೆಡ್ಡಿ, ಲಿಂಬ್ಯಾನಾಯ್ಕಾ, ಮಂಜ್ಯಾನಾಯ್ಕ, ಮನೋಜ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net