ಹೊಸ ಪಕ್ಷದ ಬಗ್ಗೆ ಏನೂ ಹೇಳಲಾರೆ; ಹರಪನಹಳ್ಳಿ ಶಾಸಕ ಜಿ.ಕರುಣಾಕರರೆಡ್ಡಿ ಪ್ರತಿಕ್ರಿಯೆ

25122022 g karunakar reddy
Published on

ಹರಪನಹಳ್ಳಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿದರೆ ನಾನೇನು ಮಾಡಲಿ? ಎಂದು ಶಾಸಕ, ಜನಾರ್ದರನ ರೆಡ್ಡಿ ಸಹೋದರ ಜಿ.ಕರುಣಾಕರರೆಡ್ಡಿ ಪ್ರತಿಕ್ರಿಯಿಸಿದರು. 26 ವರ್ಷದಿಂದ ನಾನು ಬಿಜೆಪಿಯಲ್ಲಿದ್ದೇನೆ. ಈಗ ಜಿ. ಜನಾರ್ದನರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಎಂಬ ಹೊಸ ಪಕ್ಷ ಕಟ್ಟಿದ್ದಾರೆ. ಈ ಬಗ್ಗೆ ನಾನು ಹೇಳಲಾರೆ. ನಾನು ಬಿಜೆಪಿ ಪಕ್ಷದಲ್ಲಿರುವುದನ್ನು ನೋಡಿ ನಿವೇ ಅರ್ಥ ಮಾಡಿಕೊಳ್ಳಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net