

ಹರಪನಹಳ್ಳಿ: ವಿಜಯನಗರ ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಬಿ.ಜೆಡ್.ಜಮೀರ್ ಆಹ್ಮದ್ ಖಾನ್ ಆ.14ರಂದು ಮೊದ ಬಾರಿಗೆ ತಾಲೂಕು ಪ್ರವಾಸ ಕೈಗೊಂಡಿದ್ದಾರೆ.
ಬೆಳಗ್ಗೆ 10ಕ್ಕೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆ ಅಲಿಸಲಿದ್ದಾರೆ. ಬಳಿಕ ಪೊಲೀಸ್ ಕ್ವಾಟ್ರಸ್ ಬಳಿ ನೂತನ ಪೊಲೀಸ್ ಠಾಣೆ ಉದ್ಘಾಟಿಸುವರು.ಬಳಿಕ ಚಿಕ್ಕಳ್ಳಿ ಗ್ರಾಮದ ಸಮೀಪ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘ 2 ಎಕರೆ ಭೂಮಿಯಲ್ಲಿ ರೇಷ್ಮೆ ಸಸಿ ಬೆಳೆಸಲು ಮುಂದಾಗಿದ್ದು, ಪರಿಶೀಲಿಸಲಿದ್ದಾರೆ.
ತದನಂತರ ಆನಂತನಹಳ್ಳಿ ಬಳಿ ಇರುವ ಆದರ್ಶ ವಿದ್ಯಾಲಯದಲ್ಲಿ ಭೋಜನಾಲಯ ವೀಕ್ಷಣೆ, ಕಿತ್ತೂರು ರಾಣಿ ಚನ್ನಮ್ಮ ಶಾಲೆಗೆ ಭೇಟಿ, ತೆಲಿಗಿ ನಾಡ ಕಚೇರಿ ಉದ್ಘಾಟನೆ, ಎಪಿಎಂಸಿ ಸಭಾಂಗಣದಲ್ಲಿ ಹರಪನಹಳ್ಳಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.