ಮದ್ಯವರ್ತಿ ವಿರುದ್ಧ ಕ್ರಮಕ್ಕೆ ಒತ್ತಾಯ

2200722 Karnataka Raitha Mitra Sangha Protest
ಹರಪನಹಳ್ಳಿ ಉಪನೋಂದಾಣಿ ಅಧಿಕಾರಿ ದೀಪಾ ಮ್ಯಾಳಿಗೆ ಶುಕ್ರವಾರ ಮನವಿ ಸಲ್ಲಿಸಿದ ಕರ್ನಾಟಕ ರೈತ ಮಿತ್ರ ಸಂಘದ ಕಾರ್ಯಕರ್ತರು ಮದ್ಯವರ್ತಿ ಜಿಲ್ಲಾ ಪತ್ರ ಬರಹಗಾರ ಡಂಕಿ ಇಮ್ರಾನ್ ಬಾಷಾ ಪರವಾನಗಿ ರದ್ದುಗೊಳಿಸಲು ಒತ್ತಾಯಿಸಿದರು.
Published on

ಹರಪನಹಳ್ಳಿ: ಮೃತಪಟ್ಟವರ ಹೆಸರಿನಲ್ಲಿರುವ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ನೋಂದಾಯಿತ ದಾನ ಪತ್ರ ಮಾಡಿದ ಮದ್ಯವರ್ತಿ ಜಿಲ್ಲಾ ಪತ್ರ ಬರಹಗಾರ ಡಂಕಿ ಇಮ್ರಾನ್ ಬಾಷಾರ ಪರವಾನಗಿ ರದ್ದುಗೊಳಿಸಬೇಕು ಎಂದು ಕರ್ನಾಟಕ ರೈತ ಮಿತ್ರ ಸಂಘದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಪಟ್ಟಣದ ಉಪನೋಂದಾಣಿ ಅಧಿಕಾರಿ ದೀಪಾ ಮ್ಯಾಳಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಅಕ್ರಮ ಎಸಗಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂಘದ ಅಧ್ಯಕ್ಷ ಎಚ್.ವೆಂಕಟೇಶ್, ತಾಲೂಕು ಉಪಾಧ್ಯಕ್ಷ ಮಾಡ್ಲಿಗೇರಿ ಹಾಲಪ್ಪ, ರೇಣುಕಮ್ಮ, ಮುಖಂಡರಾದ ಹೈದರಾಲಿ, ಗಫಾರ್, ರಾಜು ಕಟ್ಟಿ, ಮಹ್ಮದ್ ರಫಿಕ್, ಷೇಕ್ಷಾವಲಿ, ಶಬ್ಬೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net