

ಹರಪನಹಳ್ಳಿ: ಪಟ್ಟಣ ಸಮೀಪದ ದೇವರ ತಿಮಲಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಲಕ್ಷ್ಮೀ ವೆಂಕಟೇಶ್ವರ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಗುರುವಾರ ರಾತ್ರಿ ಸಂಭ್ರಮದಿಂದ ಜರುಗಿತು. ಗೋವಿಂದ.. ಗೋವಿಂದ ಎನ್ನುವ ಭಕ್ತರ ಉದ್ಘೋಷ ಮುಗಿಲು ಮುಟ್ಟುವಂತಿತ್ತು. ಜನರು ಬಾಳೆ ಹಣ್ಣು ತೂರಿ ಭಕ್ತಿ ಸಮರ್ಪಿಸಿದರು. ಉದ್ಗಟ್ಟಿ ಶ್ರೀಹರಿಗೆ ಪಟ ಹರಾಜು ಆಯಿತು. ಅರ್ಜುನ ವಾಲ್ಮೀಕಿಗೆ ಹೂವಿನ ಹಾರ ಹರಾಜಾಯಿತು.
ಶಾಸಕ ಜಿ.ಕರುಣಾಕರರೆಡ್ಡಿ, ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ್, ಧರ್ಮದರ್ಶಿಗಳಾದ ಕಟ್ಟಿ ಹರ್ಷ, ದಂಡಿನ ಹರೀಶ, ಕಾಂಗ್ರೆಸ್ ಹಿರಿಯ ಮುಖಂಡ ಸಿ.ಚಂದ್ರಶೇಖರ ಭಟ್, ಎಚ್.ಕೆ.ಹಾಲೇಶ, ಶಶಿಧರ ಪೂಜಾರ, ಎಚ್.ಎಂ.ಮಲ್ಲಿಕಾರ್ಜುನ, ಡಾ.ರಮೇಶ, ಮುಖ್ಯ ಅರ್ಚಕ ಲಕ್ಷ್ಮೀಪತಿ, ಶ್ರೀನಿವಾಸ ಪೂಜಾರ, ಸಿಪಿಐ ನಾಗರಾಜ ಕಮ್ಮಾರ, ಪಿಎಸ್ ಐ ಪ್ರಕಾಶ, ದಾರ್ಮಿಕ ದತ್ತಿ ಇಲಾಖೆಯ ರಮೇಶ, ಶಿವಕುಮಾರ, ಗ್ರಾಮದ ಮುಖಂಡರಾದ ಸಣ್ಣ ನಿಂಗಪ್ಪ, ನಾಗರಾಜ, ಜಿ.ರಮೇಶ ಇದ್ದರು.