ಸಾಮಾಜಿಕ ಭದ್ರತೆಗೆ ಸಿಗುತ್ತಿಲ್ಲ ಆದ್ಯತೆ

ಹರಪನಹಳ್ಳಿಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು. ಪ್ರಮುಖರಾದ ಬಳಗಾನೂರು ಕೊಟ್ರೇಶ್, ಅನಿಲ್ ಕುಮಾರ, ಯರಬಳ್ಳಿ ಅಭಿಷೇಕ್, ಅರುಣ, ದಾದಾಪೀರ್, ಕೋಟೆಪ್ಪ. ದುಗ್ಗತ್ತಿ ಹನುಮಂತಪ್ಪ, ಉಚ್ಚಂಗಿದುರ್ಗ ಪರಸಪ್ಪ, ಚೌಡಪ್ಪ, ಮತ್ತಿಹಳ್ಳಿ ಅಂಜಿನಪ್ಪ ಇತರರಿದ್ದರು.

Published on

ಹರಪನಹಳ್ಳಿ: ಹಕ್ಕುಗಳನ್ನು ಪಡೆಯಲು ಕಾರ್ಮಿಕರು ಸರ್ಕಾರಗಳೊಂದಿಗೆ ನಿರಂತರ ಸಂಘರ್ಷಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಿಪಿಐ ರಾಜ್ಯ ಸಮಿತಿ ಮಾಜಿ ಸದಸ್ಯ ಕೆ.ಎಸ್.ಹಡಗಲಿಮಠ ಹೇಳಿದರು.

ಪಟ್ಟಣದ ಹಡಗಲಿ ರಸ್ತೆ ಬಳಿ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಜಗತ್ತಿನ ಸುಮಾರು 80 ರಾಷ್ಟ್ರಗಳು ಮೇ 1 ರಂದೇ ಕಾರ್ಮಿಕ ದಿನಾಚರಣೆ ಆಚರಿಸುತ್ತವೆ.

ಪ್ರಸ್ತುತ ಜಾಗತೀಕರಣ ಮತ್ತು ಬಂಡವಾಳಶಾಹಿಯ ಅಲೆಯಲ್ಲಿ ಕಾರ್ಮಿಕರ ಕಾನೂನುಬದ್ಧ ಹಕ್ಕುಗಳು, ಸಾಮಾಜಿಕ ಭದ್ರತೆಯಂಥ ಆದ್ಯತೆಗಳು ಇಲ್ಲದಂತಾಗಿವೆ. ನಿರಂತರ ಹೋರಾಟದ ಪರಿಣಾಮ ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಗುತ್ತಿವೆ ಎಂದು ತಿಳಿಸಿದರು.

ಸಿಪಿಐ ತಾಲೂಕು ಕಾರ್ಯದರ್ಶಿ ಕೆರೆಗುಡಿಹಳ್ಳಿ ಹಾಲೇಶ ಮಾತನಾಡಿ, ಕಾರ್ಮಿಕರ ಸಾಮಾಜಿಕ ನ್ಯಾಯ, ಶಿಸ್ತುಬದ್ಧ ಕೆಲಸ, ಹಕ್ಕುಗಳ ಪ್ರಜ್ಞೆ ಮತ್ತು ಆರೋಗ್ಯ ಸುರಕ್ಷೆ ಜಾರಿಗೆ ಸರ್ಕಾರ ಬದ್ಧತೆ ಪ್ರದರ್ಶಿಸಬೇಕು ಎಂದು ಅಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net