ಹರಪನಹಳ್ಳಿಯಲ್ಲಿ ನಡೆಯಿತು ಕಾಮದಹನ ಆಚರಣೆ

MAR7-HRP-5a
Published on

ಹರಪನಹಳ್ಳಿ: ಪಟ್ಟಣ ಸೇರಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಮಂಗಳವಾರ ರಾತ್ರಿ ಕಾಮದಹನ ಆಚರಣೆ ನಡೆಯಿತು.

ಬಣಗಾರಪೇಟೆ, ಸಾಳೇರ ಓಣಿ, ಕೆಂಪಯ್ಯನ ಮಠದ ಹತ್ತಿರ, ಜೋಷಿಕೇರಿ ಮತ್ತಿತರ ಕಡೆಗಳಲ್ಲಿ ರತಿ-ಮನ್ಮಥರನ್ನು ಸ್ಮರಣೆ ನಡೆಯಿತು. ತಾಯಮ್ಮ ಹುಣಸೆಮರದ ಹತ್ತಿರ ಸಂಸ್ಕಾರ ಭಾರತಿ ಮತ್ತಿತರ ಸಂಘಗಳು ಕಾಮಣ್ಣನ ದಹನ ಕಾರ್ಯಕ್ರಮ ನೆರವೇರಿಸಿದರು.

ಬಣ್ಣದ ಮಡಿಕೆ ಒಡೆಯುವ, ಹಲಗೆ ವಾದನ ಸಹಿತ ಓಕುಳಿ ಬುಧವಾರ ನಡೆಯಲಿದ್ದು, ಯುವಕರು, ಯುವತಿಯರು ಮತ್ತು ಮಕ್ಕಳು ಸಿದ್ಧತೆ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net