ಹಲವು ವರ್ಷಗಳಿಂದ ಸೇವೆ ಸಲ್ಲಿಸಿದರೂ ಸಿಗದ ನ್ಯಾಯ

Harpanahalli teacher portest
ಹರಪನಹಳ್ಳಿಯಲ್ಲಿ ಬಿಇಒ ಬಿ.ಬಸವರಾಜಪ್ಪಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಸಲ್ಲಿಸಿತು. ಸಂಘದ ಜಿಲ್ಲಾಧ್ಯಕ್ಷ ಬಸವರಾಜ, ತಾಲೂಕು ಅಧ್ಯಕ್ಷ ಬಿ.ರಾಜಶೇಖರ, ರಾಜ್ಯ ಘಟಕ ಉಪಾಧ್ಯಕ್ಷೆ ಜಿ.ಪದ್ಮಲತಾ, ಪ್ರಮುಖರಾದ ಷರೀಫ ಮಕರಬ್ಬಿ, ಸಿದ್ದೇಶ್, ಸೊಪ್ಪಿನ ಹನುಮಂತಪ್ಪ, ಡಿ.ದಯಾನಂದ, ಪಿ.ಸುಬ್ಬಣ್ಣ, ಎಂ.ಎಚ್.ರಾಘವೇಂದ್ರ, ಎಂ.ರಮೇಶ, ಎಂ.ರತ್ನಮ್ಮ ಇತರರಿದ್ದರು.
Published on

ಹರಪನಹಳ್ಳಿ: ಹೊಸ ವೃಂದ ನೇಮಕಾತಿ ನಿಯಮಗಳಿಂದಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತ್ತಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಆರೋಪಿಸಿದರು.

ಪಟ್ಟಣದಲ್ಲಿ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು ಹಾಗೂ ಬಿಇಒ ಬಿ.ಬಸವರಾಜಪ್ಪಗೆ ಮನವಿ ಸಲ್ಲಿಸಿ ಮಾತನಾಡಿದರು. 2017ರ ನಂತರ ಶಿಕ್ಷಕ ವೃತ್ತಿಗೆ ಆಯ್ಕೆಯಾದವರಿಗೆ ನೇರವಾಗಿ 6 ಮತ್ತು 7ನೇ ತರಗತಿಗೆ ಬೋಧನೆ ಮಾಡಲು ಅವಕಾಶ ನೀಡಿದ್ದಾರೆ. ಆದರೆ, 2016ಕ್ಕಿಂತ ಮೊದಲು ನೇಮಕವಾಗಿ ಹಲವು ವರ್ಷ ಸೇವೆ ಸಲ್ಲಿಸಿದರೂ ಬಡ್ತಿ ಇಲ್ಲವಾಗಿದೆ. ಇದರಿಂದ ಅನ್ಯಾಯವಾಗುತ್ತಿದ್ದು, ನಿಯಮ ಬದಲಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಸಂಘದ ತಾಲೂಕು ಅಧ್ಯಕ್ಷ ಬಿ ರಾಜಶೇಖರ ಮಾತನಾಡಿ, ಪದವಿ ಪೂರೈಸಿದ ಶಿಕ್ಷಕರನ್ನು ಸೇವಾ ಜ್ಯೇಷ್ಠತೆಯೊಂದಿಗೆ ಪದವೀಧರ ಶಿಕ್ಷಕರೆಂದು ಪದನಾಮ ನೀಡಬೇಕು. 2016ರ ಪೂರ್ವದಲ್ಲಿ ಅರ್ಹತೆ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯ ಘಟಕದ ಉಪಾಧ್ಯಕ್ಷೆ ಜಿ.ಪದ್ಮಲತಾ, ಕೆ.ನಟರಾಜ, ಪ್ರಮುಖರಾದ ಚಂದ್ರಮೌಳಿ, ಅರ್ಜುನ್ ಪರುಸಪ್ಪ, ಎಸ್. ರಾಮಪ್ಪ, ಗಣೇಶ್, ಪದ್ಮರಾಜ್ ಜೈನ್, ಕೆ ಅಂಜಿನಪ್ಪ, ಪಿ.ಶಿವಾನಂದಗೌಡ, ಜುಂಜಪ್ಪ, ಬಂದಮ್ಮ, ರೇಖಾ, ಬಿ.ಕೊಟ್ರೇಶಪ್ಪ, ಮಡ್ಡಿ ನಾಗರಾಜ, ಹನುಮಂತಪ್ಪ, ಶಫಿ ಸವಣೂರು, ಅನಂತ್ ನಾಯ್ಕ, ಅಣ್ಣಪ್ಪ ಬಾಗಳಿ, ಎಂ.ರತ್ನಮ್ಮ, ಎಂ.ಮಂಜಪ್ಪ ತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net