

ಹರಪನಹಳ್ಳಿ: ಮನುಷ್ಯ ಜೀವನದಲ್ಲಿ ಸುಖವಾಗಿರಲು ಆರೋಗ್ಯ ಬಹಳ ಮುಖ್ಯ ಹಾಗಾಗಿ ಕ್ರೀಡಾ ಚಟುವಟಿಕೆಗಳಿಗೆ ಪ್ರತಿನಿತ್ಯ ಒಂದು ಗಂಟೆ ಮೀಸಲಿಡಿ ಎಂದು ಬಿಜೆಪಿ ದಿಶಾ ಸಮಿತಿ ಸದಸ್ಯೆ ಕುಸುಮಾ ಜಗದೀಶ್ ಹೇಳಿದರು.
ತಾಲೂಕಿನ ಹುಲಿಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡಾ ಪಟುಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆ, ಕಾಲೇಜು ಹಂತದಲ್ಲಿದ್ದಾಗ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿ ಕ್ರೀಡಾ ಮೀಸಲಾತಿಯಿಂದ ಅನೇಕರು ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಕ್ರೀಡಾಕೂಟದಲ್ಲಿ ಉಳಿದವರೂ ಸ್ಪರ್ಧಿಸಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದರು.
ಇದೇ ವೇಳೆ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಗ್ರಾಮದ ಮುಖಂಡರಾದ ಕೊಟ್ರಪ್ಪ, ಹಾಲೇಶ್, ಚಂದ್ರಪ್ಪ, ಹುಚ್ಚಪ್ಪ ಇತರರು ಇದ್ದರು.