ಕಾವಲುಗಾರರನ್ನು ಮರು ನೇಮಿಸಿಕೊಳ್ಳುವಂತೆ ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಮುಖಂಡ ಹೊಸಳ್ಳಿ ಮಲ್ಲೇಶ್ ಒತ್ತಾಯ

121022 Harakanalu Labours Protest
ಹರಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾಪಂ ವ್ಯಾಪ್ತಿಯಲ್ಲಿ ವೆಸ್ಟಾಸ್ ವಿಂಡ್ ಪವರ್‌ಖಾಸಗಿ ಕಂಪನಿ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿದರು.
Published on

ಹರಪನಹಳ್ಳಿ: ಕೆಲಸದಿಂದ ತೆಗೆದು ಹಾಕಿದ್ದರಿಂದ ಬದುಕು ಬೀದಿಗೆ ಬಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಉದ್ಯೋಗ ಕಳೆದು ಕೊಂಡ 29 ಕಾವಲುಗಾರ ಕುಟುಂಬಗಳ ಸದಸ್ಯರು ವಿಷದ ಬಾಟಲಿ ಹಿಡಿದು ವೆಸ್ಟಾಸ್ ವಿಂಡ್ ಪವರ್ ಕಂಪನಿ ಗೇಟ್ ಎದುರು ಮಂಗಳವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಹಾರಕನಾಳು ಗ್ರಾಪಂ ವ್ಯಾಪ್ತಿಯಲ್ಲಿ ವಿದೇಶಿ ಮೂಲದ ಈ ಕಂಪನಿ 20 ವಷರ್ಗಳ ಹಿಂದೆ ರೈತರಿಂದ ಭೂಮಿ ವಶಪಡಿಸಿಕೊಂಡು ಕಂಪನಿ ಆರಂಭಿಸಿತ್ತು. ಭೂಮಿ ಕಳೆದುಕೊಂಡ ರೈತರ ಮನೆಗೊಬ್ಬರಂತೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಅದರಂತೆ 29 ಉದ್ಯೋಗಗಳನ್ನು ಕಂಪನಿಯು ನೇಮಕ ಮಾಡಿಕೊಂಡಿತ್ತು ಈಗ 18 ವಷರ್ಗಳ ನಂತರ ಏಕಾಏಕಿ ಉದ್ಯೋಗಿಗಳನ್ನು ತೆಗೆದು ಹಾಕಿ ಆದೇಶ ಹೊರಡಿಸಿದೆ ಎಂದು ಕಾವಲುಗಾರರು ನೋವು ತೋಡಿಕೊಂಡರು.

ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಮುಖಂಡ ಹೊಸಳ್ಳಿ ಮಲ್ಲೇಶ್ ಪ್ರತಿಭಟನಾ ಸ್ಥಳಕ್ಕೆ ಭೇಟಿ, ಇದು ಕಾನೂನು ಬಾಹಿರ. ಕೂಡಲೇ ಈ 29ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಸಿಪಿಐ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಸ್ಥಳೀಯ ಬಿಜೆಪಿ ಮುಖಂಡ ಮಂಜನಾಯ್ಕ ಮಾತನಾಡಿದರು.

ಎನ್‌ಎಸ್‌ಯುಐ ಸಂಘಟನೆಯ ಹರಿಶ್ಚಂದ್ರನಾಯ್ಕ, ಬಸವರಾಜ್, ವಿರೇಶ್ ನಾಯ್ಕ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಹಾಲೇಶ್ ನಾಯ್ಕ, ಪಂಪಾನಾಯ್ಕ, ಗ್ರಾಪಂ ಸದಸ್ಯರಾದ ಕುರಗುಂಟಿ ನಿಂಗಪ್ಪ, ಬಸವನಗೌಡ, ದುರುಗದಯ್ಯ, ಮುಖಂಡರಾದ ರಾಜಶೇಖರ ಗೌಡ, ನಂದೀಶ್, ಕಲ್ಲನ ಗೌಡ, ಮಂಜಯ್ಯ, ಶಿವಕುಮಾರ್, ನಾಗರಾಜ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net