ಸರ್ಕಾರಿ ಶಾಲೆಯಲ್ಲಿ ಬೆಂಕಿ ಅವಘಡ

School Burnt
ಕ್ಯಾರಕಟ್ಟೆ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಬೆಂಕಿಯಿಂದ ಸುಟ್ಟಿರುವ ಸಾಮಗ್ರಿ.
Published on

ಹರಪನಹಳ್ಳಿ: ಕ್ಯಾರಕಟ್ಟೆ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಗುರುವಾರ ರಾತ್ರಿ ಸ್ಟೋರ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ವಸ್ತುಗಳು ಹಾನಿಗೀಡಾಗಿವೆ.

ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಗ್ರಾಮಸ್ಥರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅವರು ಬರುವಷ್ಟರಲ್ಲೇ ಕೊಠಡಿಯಲ್ಲಿದ್ದ ಅಕ್ಕಿ, ಗೋದಿ, ಹಾಲಿನ ಪುಡಿ, ಶೂ ಮತ್ತು ಸಾಕ್ಸ್, ಶುಚಿ ಪ್ಯಾಡ್, ನಲಿಕಲಿ ಟೇಬಲ್ಸ್, ಪ್ಲಾಸ್ಟಿಕ್ ಕುರ್ಚಿಗಳು, ಕಲಿಕಾ ಉಪಕರಣಗಳು, ಫ್ಯಾನ್, ಪೈಪ್‌ಗಳು ಸುಟ್ಟಿವೆ.

ನಂತರ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿತು ಎಂದು ಮುಖ್ಯಶಿಕ್ಷಕ ಪುರಂದರ ಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net