ಹಬ್ಬಕ್ಕೆ ಬಂದಿದ್ದ ಗೃಹಿಣಿಯ ಕೊಲೆ

17102022 raichur murder
Published on

ಹರಪನಹಳ್ಳಿ: ತಾಲೂಕಿನ ದುಗ್ಗಾವತಿಯಲ್ಲಿ ಹಬ್ಬಕ್ಕೆ ಬಂದಿದ್ದ ಗೃಹಿಣಿಯನ್ನು ಭಾನುವಾರ ಸಂಜೆ ಚಾಕುವಿನಿಂದ ತಿವಿದು ಭಗ್ನ ಪ್ರೇಮಿ ಕೊಲೆ ಮಾಡಿದ್ದಾನೆ. ಪ್ರತಿಭಾ(27) ಕೊಲೆಯಾದ ಮಹಿಳೆ. ಚಿರಸ್ತಹಳ್ಳಿ ಮೂಕಪ್ಪನವರ ಹನುಮಂತಪ್ಪ ಆರೋಪಿ.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಪ್ರತಿಭಾ, ತನ್ನ ಪುತ್ರನೊಂದಿಗೆ ದುಗ್ಗಾವತಿ ಸಂಬಂಧಿಕರ ಮನೆಗೆ ಬಂದಿದ್ದರು. ಈಕೆ ಮೇಲೆ ಹನುಮಂತಪ್ಪ ಏಕಾಏಕಿ ದಾಳಿ ನಡೆಸಿ, ಚಾಕುವಿನಿಂದ ತಿವಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ವಿ.ಎಸ್.ಹಾಲಮೂರ್ತಿ, ಸಿಪಿಐ ನಾಗರಾಜ ಕಮ್ಮಾರ ಮತ್ತು ಪಿಎಸ್‌ಐ ಗುರುರಾಜ ಭೇಟಿ ನೀಡಿದ್ದರು. ಆರೋಪಿತನ ಮಾಹಿತಿ ಕಲೆ ಹಾಕಿ, ನೀಲಗುಂದ ಕ್ರಾಸ್ ಹತ್ತಿರ ಸೋಮವಾರ ವಶಕ್ಕೆ ಪಡೆದಿದ್ದಾರೆ. ಪ್ರತಿಭಾಳನ್ನು ಪ್ರೀತಿಸುವುದಾಗಿ ಹನುಮಂತಪ್ಪ ಹೇಳಿಕೊಂಡು ತಿರುಗಾಡುತ್ತಿದ್ದ. ಆದರೆ, ಆಕೆಯನ್ನು ಬೇರೆ ಹುಡುಗನಿಗೆ ವಿವಾಹ ಮಾಡಿಕೊಡಲಾಗಿತ್ತು. ಇದರಿಂದ ಕೋಪಗೊಂಡ ಆತ ಈ ಕೃತ್ಯ ಎಸಗಿದ್ದಾನೆಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net