ದೋಣಿ ಕೆಂಚಮ್ಮ ದೇವಿ ಜಾತ್ರೋತ್ಸವ ಅದ್ದೂರಿ

Harapanahlli Devi
ಬಾಗಳಿ ಗ್ರಾಮದಲ್ಲಿ ಸೀಗೆ ಹುಣ್ಣಿಮೆಯ ಪ್ರಯುಕ್ತ ದೋಣಿ ಕೆಂಚಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಯಿತು.
Published on

ಹರಪನಹಳ್ಳಿ: ತಾಲೂಕಿನ ಬಾಗಳಿ ಗ್ರಾಮದಲ್ಲಿ ಸೀಗೆ ಹುಣ್ಣಿಮೆ ಪ್ರಯುಕ್ತ ದೋಣಿ ಕೆಂಚಮ್ಮ ದೇವಿ ಜಾತ್ರೋತ್ಸವ ಅದ್ದೂರಿಯಾಗಿ ಜರುಗಿತು.

ಮಂಗಳವಾರ ತಡರಾತ್ರಿ 3 ಗಂಟೆಯ ಸಂದರ್ಭದಲ್ಲಿ ಗ್ರಾಮದ ಹೃದಯ ಭಾಗದಲ್ಲಿರುವ ದೇವಸ್ಥಾನದಿಂದ ಮೆರವಣಿಗೆ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿರುವ ಚೌತಿಕಟ್ಟೆವರೆಗೆ ಮೆರವಣಿಗೆ ನಡೆಯಿತು.

ಬುಧವಾರ ಮುಂಜಾನವರೆಗೆ ಡೊಳ್ಳಿನ ಮಜಲು, ಕೋಲಿನ ಮೇಳ, ಸಿಡಿಮದ್ದು ಉತ್ಸವ ಜರುಗಿತು.ಸಂಜೆ 5 ಗಂಟೆ ನಂತರ ದೇವಿಯ ಹರಾಜು ಪ್ರಕ್ರಿಯೆ ನಡೆಯಿತು. ನಂತರ ದೇವಿಯನ್ನು ಅದ್ದೂರಿ ಪಂಜಿನ ಮೆರವಣಿಗೆಯೊಂದಿಗೆ ಕೆರೆಯಲ್ಲಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು.

ವಿವಿಧ ಧಾರ್ಮಿಕ ವಿಧಿವಿಧಾನಗಳ ನೆರವೇರೆಸಿ ಅಂತಿಮವಾಗಿ ಕೆರೆ ಕೋಡಿಯಲ್ಲಿರುವ ಬನ್ನಿ ಮಂಟಪದಲ್ಲಿ ವಿಸರ್ಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net