

ಹರಪನಹಳ್ಳಿ: ಕರೋನಾದಿಂದ ಅನೇಕ ದೇಶಗಳು ನಲುಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಕಾರ್ಯಕ್ರಮಗಳ ಮೂಲಕ ಭಾರತದ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ ಹೇಳಿದರು.
ತಾಲೂಕಿನ ಅರಸೀಕೆರೆ ಗ್ರಾಮದ ದಂಡಿನ ದುರ್ಗಮ್ಮ ದೇವಿ ಕಾರ್ತಿಕೋತ್ಸವ ಹಾಗೂ ಸಂಸದ ಜಿ.ಎಂ ಸಿದ್ದೇಶ್ವರ ಅವರ 70ನೇ ಸಂವತ್ಸರದ ಸಂಭ್ರಮಾಚರಣೆ ಅಂಗವಾಗಿ ಆಯೋಜಿಸಿದ್ದ ಮ್ಯೂಜಿಕಲ್ ನೈಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗಳೂರು ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಅರಸೀಕೆರೆ ವ್ಯಾಪ್ತಿಯ ಏಳು ಗ್ರಾಪಂ ಕೆರೆಗಳು, ಜಗಳೂರು ಕ್ಷೇತ್ರದ 57 ಕೆರೆಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ. ರಸ್ತೆ ವಿಸ್ತರಣೆಯಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ನಿವೇಶನ ಹಾಗೂ ವಸತಿ ಸೌಕರ್ಯ ಒದಗಿಸಲಾಗುವುದು ಎಂದರು.
ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಜಿಲ್ಲೆಗೆ ಏಕಲವ್ಯ ಶಾಲೆಯ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ ಎಂದರು. ಅಬಕಾರಿ ಇಲಾಖೆ ಜಂಟಿ ಆಯುಕ್ತ ವೈ.ಡಿ ಮಂಜುನಾಥ್ ಮಾತನಾಡಿದರು. ಬೆಂಗಳೂರಿನ ಗಂಧರ್ವ ಈವೆಂಟ್ಸ್ ಇವರ ವತಿಯಿಂದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ರವರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಮುಖರಾದ ಗಾಯಿತ್ರಿ ಸಿದ್ದೇಶ್, ಇಂದಿರಾ ರಾಮಚಂದ್ರಪ್ಪ, ರಾಜೇಂದ್ರ ಸಿಂಹ, ಶಿವಕುಮಾರ್, ರೇಖಾ ಕೊಟ್ರೇಶ್, ವೈ.ಡಿ ಅಣ್ಣಪ್ಪ, ಪ್ರಶಾಂತ್ ಪಾಟೀಲ್, ವಿಶಾಲಕ್ಷಮ್ಮ, ಕೆಂಚನಗೌಡ, ನಂದಿನಿ, ಕವಿತಾ, ಹಾಲೇಶ, ಅಜಯ, ಚಂದ್ರಪ್ಪ, ಸುಶೀಲಮ್ಮ, ಸೊಕ್ಕೆ ನಾಗರಾಜ್, ಫಣಿಯಾಪುರ ಲಿಂಗರಾಜ, ವೈ.ಸಿದ್ದಪ್ಪ, ಮಂಜಣ್ಣ, ಚಂದ್ರನಾಯ್ಕ ಇತರರು ಇದ್ದರು.