ಸದೃಢ ದೇಹಕ್ಕೆ ಕ್ರೀಡೆ ಅಗತ್ಯ

Harapanahalil Dasara Sports
ಹರಪನಹಳ್ಳಿಯಲ್ಲಿ ದಸರಾ ಕ್ರೀಡಾಕೂಟಕ್ಕೆ ಬಿಇಒ ಯು.ಬಸವರಾಜಪ್ಪ ಚಾಲನೆ ನೀಡಿದರು.
Published on

ಹರಪನಹಳ್ಳಿ: ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜ. ಸದೃಢ ದೇಹಕ್ಕೆ ಕ್ರೀಡೆಗಳು ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ಹೇಳಿದರು. ತಾಲೂಕು ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ ಬೆಳವಣಿಗೆ. ಉತ್ತಮ ಆರೋಗ್ಯ ಹೊಂದಲು ಯೋಗ, ಕ್ರೀಡೆಗಳು ಅಗತ್ಯವಾಗಿವೆ ಎಂದರು. ಪುರಸಭೆ ಅಧ್ಯಕ್ಷ ಎಚ್.ಎಂ.ಅಶೋಕ ಮಾತನಾಡಿ, ಪಠ್ಯಗಳಂತೆ ಕ್ರೀಡೆಗಳಿಗೂ ಒತ್ತು ನೀಡಬೇಕು ಎಂದರು. ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಂ.ಮಂಜುನಾಥಯ್ಯ, ನವೋದಯ ಕ್ರೀಡಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕಲಾರಿ ಫತ್ತೆಮಹ್ಮದ್, ದೈಹಿಕ ಶಿಕ್ಷಕರಾದ ಜಯಪ್ರಕಾಶ್, ರಾಜಪ್ಪ, ಲಕ್ಯನಾಯ್ಕ, ಜನಾರ್ದನರೆಡ್ಡಿ, ತಿರುಪತಿ, ಶಿವಮ್ಮ, ದೇವರಾಜ, ಪರಶುರಾಮ, ಲಕ್ಷ್ಮಿದೇವಿ, ಮಂಜುನಾಥ, ನಂದಿನಿ ಓಡೆಯರ್, ಯಾಸಿನ್ ಕೋಟೆಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net