ದಂಡಿನ ದುರುಗಮ್ಮ ಜಾತ್ರೆಗೆ ಚಾಲನೆ

Harapanhallli Durgamma
ಹರಪನಹಳ್ಳಿ ತಾಲೂಕಿನ ಅರಸೀಕೆರೆ ದಂಡಿನ ದುರುಗಮ್ಮ ದೇವಸ್ಥಾನದಲ್ಲಿ ಭಕ್ತರು ದೀಪಗಳ ಹಚ್ಚಿ ಕಾರ್ತಿಕೋತ್ಸವ ಆಚರಿಸಿದರು.
Published on

ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಇತಿಹಾಸ ಪ್ರಸಿದ್ಧ ದಂಡಿನ ದುರುಗಮ್ಮ ದೇವಸ್ಥಾನದಲ್ಲಿ ಭಕ್ತರು ದೀಪ ಹಚ್ಚಿ ಕಾರ್ತಿಕೋತ್ಸವ ಆಚರಿಸುವ ಮೂಲಕ ದೇವಿ ಜಾತ್ರೆಗೆ ಚಾಲನೆ ನೀಡಿದರು.

ಬಣ್ಣಗಳಿಂದ ಅಲಂಕರಿಸಿದ್ದ ಎತ್ತುಗಳಿಗೆ ಹೂವು, ಬಲೂನ್, ರಿಬ್ಬನ್ ಕಟ್ಟಿ ಮೆರವಣಿಗೆ ಮಾಡಲಾಯಿತು. ಮಹಿಳೆಯರ ಜಾನಪದ ಹಾಡು, ಡೊಳ್ಳು ಕುಣಿತ ಗಮನಸೆಳೆದವು. ಕಾರ್ತಿಕೋತ್ಸವ ಬಳಿಕ ರೋಗ ರುಜಿನಗಳು ಬಾರದಂತೆ ಭಕ್ತರು ಪ್ರಾರ್ಥನೆ ಸಲ್ಲಿಸಿದರು.

ಎತ್ತುಗಳಿಗೆ ಹಬ್ಬದ ಅಡುಗೆ ಉಣಬಡಿಸಿದ ನಂತರವೇ ಮನೆ ಮಂದಿ ಒಟ್ಟಿಗೆ ಕುಳಿತು ಊಟ ಮಾಡುವುದು ಜಾತ್ರೆ ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net