ಬಿಜೆಪಿಯ ಸುಳ್ಳು ಆಮಿಷಕ್ಕೆ ಜನ ಬಲಿಯಾಗಲ್ಲ

Basavaraj Matturu
ಬಸವರಾಜ ಮತ್ತೂರು.
Published on

ಹರಪನಹಳ್ಳಿ: ಚುನಾವಣಾ ಹೊಸ್ತಿಲಲ್ಲಿ ರಾಜ್ಯ ಬಿಜೆಪಿ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಚುನಾವಣಾ ರಾಜಕಾರಣ ಮಾಡುತ್ತಿರುವುದು ಖಂಡನೀಯ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್ ದೂರಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಜನ ಪರವಾದ ಆಡಳಿತ ಕೊಟ್ಟಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ. ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಸರ್ಕಾರಿ ಇಲಾಖೆ ಮುಖ್ಯಸ್ಥರೇ ಕರೆದುಕೊಂಡು ಹೋಗಿರುವ ಪರಿಸ್ಥಿತಿ ನೋಡಿದರೆ ಕರ್ನಾಟಕದಲ್ಲಿ ಬಿಜೆಪಿ ಸಂಪೂರ್ಣ ದಿವಾಳಿಯಾಗಿದೆ ಎಂಬುದಕ್ಕೆ ಸಾಕ್ಷಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪದೇಪದೆ ಕರ್ನಾಟಕಕ್ಕೆ ಬರುವ ಮೂಲಕ ರಾಜ್ಯ ಬಿಜೆಪಿಯವರ ಫೇಸ್ ವ್ಯಾಲ್ಯೂಯಿಂದ ಮತಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ರಾಷ್ಟ್ರೀಯ ನಾಯಕರೇ ಒಪ್ಪಿಕೊಂಡಂತಾಗಿದೆ. ಪ್ರವಾಹ, ಕರೊನಾ… ಹೀಗೆ ಕರ್ನಾಟಕ ವಿವಿಧ ಸಂಕಷ್ಟದಲ್ಲಿದ್ದಾಗ ತಿರುಗಿಯೂ ನೋಡದ ನರೇಂದ್ರ ಮೋದಿ ಚುನಾವಣಾ ಕಾರಣದಿಂದ ಕರ್ನಾಟಕಕ್ಕೆ ಬರುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net