ಬಿಜೆಪಿ, ಕಾಂಗ್ರೆಸ್‌ಗೆ ಆಪ್‌ನ ಭಯ, ಎಎಪಿ ವಿಜಯನಗರ ಜಿಲ್ಲಾ ಅಧ್ಯಕ್ಷ ಕಾಳಿದಾಸ ಹೇಳಿಕೆ

171122 Harapanahali AAP Party
ಹರಪನಹಳ್ಳಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಎಎಪಿ ವಿಜಯನಗರ ಜಿಲ್ಲಾಧ್ಯಕ್ಷ ಕಾಳಿದಾಸ ಮಾತನಾಡಿದರು.
Published on

ಹರಪನಹಳ್ಳಿ: ರಾಜ್ಯದಲ್ಲಿ ಆಪ್ ಚಟುವಟಿಕೆಯಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಭಯ ಹುಟ್ಟಿದೆ. ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಹರಪನಹಳ್ಳಿ ಒಳಗೊಂಡು ಐದು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಕಣದಲ್ಲಿರುವರು ಎಂದು ಎಎಪಿ ವಿಜಯನಗರ ಜಿಲ್ಲಾಧ್ಯಕ್ಷ ಕಾಳಿದಾಸ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಅತೀವೃಷ್ಟಿಯಿಂದ 12 ಕೋಟಿ ರೂ .ಬೆಳೆ ಹಾನಿಯಾಗಿದ್ದು ಸರ್ಕಾರ ಸರಿಯಾದ ರೀತಿಯಲ್ಲಿ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ಆಮ್ ಆದ್ಮಿ ಪಕ್ಷದಿಂದ ರೈತ ಘಟಕವನ್ನು ರಚಿಸಲಾಗುವುದು. ಹರಪನಹಳ್ಳಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಮುತ್ತಿಗಿ ಎನ್.ಅಶೋಕ, ಪ್ರಧಾನ ಕಾರ್ಯದರ್ಶಿಯನ್ನಾಗಿ ಬೆಣ್ಣಿಹಳ್ಳಿ ವಿಜಯಕುಮಾರ ಅವರನ್ನು ನೇಮಕ ಮಾಡಲಾಗಿದೆ ಎಂದರು.

ಪ್ರಮುಖರಾದ ಹೊಸಕೋಟೆ ನಾಗರಾಜ ಮಾತನಾಡಿ, ಬಿಜೆಪಿಯವರು ಜನಸಂಕಲ್ಪ ಯಾತ್ರೆಯ ಹೆಸರಿನಲ್ಲಿ ಕಾಲಹರಣ ಮಾಡುತ್ತಿದ್ದರೆ, ಕಾಂಗ್ರೆಸ್‌ನವರು ಅರ್ಥವಿಲ್ಲದ ಭಾರತ ಜುಡೋ ಯಾತ್ರೆ ಆರಂಭಿಸಿದ್ದಾರೆ. ವೋಟಿಗಾಗಿ ಬಿಜೆಪಿಯವರು ಹಿಂದು-ಮುಸ್ಲಿಮರ ನಡುವೆ ಕಂದಕ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಮುಖರಾದ ಪ್ರಕಾಶ್, ಮಂಜುನಾಥ, ಸೇತುರಾವ್, ಮೃತ್ಯುಂಜಯ, ಅಬ್ಬುಸಲೇ, ಅಬ್ದುಲ ಮಲಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net