

ಹರಪನಹಳ್ಳಿ: ನಿರಂತರ ಪರಿಶ್ರಮದಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಹೊನ್ನತ್ತೆಪ್ಪ ತಿಳಿಸಿದರು.
ತಾಲೂಕಿನ ಬಂಡ್ರಿತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕನಸು ಇರಬೇಕು. ಅದಕ್ಕೆ ತಕ್ಕಂತೆ ಹಗಲಿರುಳು ಇಚ್ಛಾಶಕ್ತಿಯಿಂದ ಅಭ್ಯಾಸ ಮಾಡಬೇಕು. ಶ್ರಮಪಟ್ಟರೆ ಕನಸು ಸಾಕಾರಗೊಳ್ಳುತ್ತದೆ ಎಂದರು.
ತಾ.ಪಂ. ಇಒ ಕೆ.ಷಣ್ಮುಖಪ್ಪ ಮಾತನಾಡಿ. ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ವಿನಯವನ್ನೂ ಕಲಿಸಬೇಕು. ಹಾಗೆಯೇ ವಿದ್ಯಾರ್ಥಿಗಳು ನಿರಂತರ ಶ್ರಮಪಟ್ಟು ಅಧ್ಯಯನ ಮಾಡಿ, ಗುರಿ ತಲುಪಿ ಪಾಲಕರ ಕೀರ್ತಿ ಹೆಚ್ಚಿಸಬೇಕೆಂದು ಸಲಹೆ ನೀಡಿದರು. ಪ್ರಮುಖರಾದ ಶಂಕ್ರನಾಯ್ಕ, ಗೋಣಿಬಸ್ಯಾನಾಯ್ಕಾ, ಗೋಪಿನಾಯ್ಕ, ಕೃಷ್ಣಾನಾಯ್ಕಾ ಹಾಗೂ ಶಿಕ್ಷಕರಾದ ಮಲ್ಲೆಶ್ ಬಣಕಾರ್, ಪಿ ಮಂಜಪ್ಪ, ಬಸವರಾಜ್ ಬಿ.ಎಸ್., ಲಕ್ಷ್ಮೀದೇವಿ, ಕೆ.ಜೆ.ಚಿನ್ನಾಪುರಪ್ಪ, ಶಬ್ಬೀರ್ ಕೆ, ಗುಲಾಬ್ ಜಾನ್, ಕುರಿ ವನಿತಾ ಇತರರಿದ್ದರು.