ಕೃಷಿ ಅಭಿವೃದ್ಧಿಗಾಗಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಸಿಗುವುದಾಗಿ ಹೇಳಿದ ಶಾಸಕ ಜಿ.ಕರುಣಾಕರರೆಡ್ಡಿ

110622 Harapanahalli Gang welfare project
ಹರಪನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಶಾಸಕ ಜಿ.ಕರುಣಾಕರರೆಡ್ಡಿ ಶನಿವಾರ ಸಾಮಗ್ರಿ ವಿತರಿಸಿದರು.
Published on

ಹರಪನಹಳ್ಳಿ: ಗಂಗಾಕಲ್ಯಾಣ ಯೋಜನೆಯಡಿ ಆದಿಜಾಂಬವ ನಿಗಮದಿಂದ 23 ಮತ್ತು ಅಂಬೇಡ್ಕರ ನಿಗಮದಿಂದ ನಾಲ್ವರಿಗೆ 3.5 ಲಕ್ಷ ರೂ. ಸಹಾಯಧನದಲ್ಲಿ 2018-19ನೇ ಸಾಲಿನ ಕೊಳವೆಬಾವಿ ಸಾಮಗ್ರಿಗಳನ್ನು ನೀಡಲಾಗಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು. ಪಟ್ಟಣದ ಬಾಬು ಜಗಜೀವನ್‌ರಾಮ್ ಭವನದ ಆವರಣದಲ್ಲಿ ಶನಿವಾರ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಒಂದು ವೇಳೆ ಅಳದಲ್ಲಿ ನೀರು ದೊರೆತು ಹೆಚ್ಚಿನ ಹಣ ಖರ್ಚು ಆದಲ್ಲಿ ಫಲಾನುಭವಿಗಳಿಗೆ ನಿಗಮದಿಂದ ಸಾಲವನ್ನು ಸಹಾಯಧನ ಅಡಿ ನೀಡಲಾಗುವುದು ಎಂದರು. ಬಿಜೆಪಿ ಮುಖಂಡರಾದ ಕಣಿವಿಹಳ್ಳಿ ಮಂಜುನಾಥ, ಆರ್.ಲೋಕೇಶ್, ಎಂ.ಮಲ್ಲೇಶ್, ನಾಗರಾಜ, ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net