ಸಾಮರಸ್ಯದಿಂದ ಕೂಡಿ ಬಾಳಿ

22 KOTTUR 1
ಕೊಟ್ಟೂರಿನ ಆನಂತ ಯೋಗಾಶ್ರಮದಲ್ಲಿ ನಡೆದ ನಾಲ್ಕನೇ ಸಾಮೂಹಿಕ ವಿವಾಹ ಸಮಾರಂಭಕ್ಕೆ ಡಾ. ಹಿರಿಶಾಂತವೀರ ಸ್ವಾಮೀಜಿ ಚಾಲನೆ ನೀಡಿದಾಗ, ಮಂಜುನಾಥ ಗುರೂಜಿ, ಚಾಪಿ ಚಂದ್ರಪ್ಪ, ಮಾತಾಜಿ ಲಕ್ಷ್ಮೀದೇವಿ, ಡಾ. ಎ.ಚನ್ನಪ್ಪ ಮುಂತಾದವರಿದ್ದರು.
Published on

ಕೊಟ್ಟೂರು: ಸೌದತ್ತಿ ಮಹಾಂತೇಶ್ವರ ಸ್ವಾಮೀಜಿ ಹಾಗೂ ಮಂಜುನಾಥ ಗುರೂಜಿ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೂವಿನಹಡಗಲಿ ಗವಿಮಠ ಡಾ.ಹಿರಿಶಾಂತವೀರ ಸ್ವಾಮಿ ಹೇಳಿದರು.

ಇಲ್ಲಿನ ಆನಂದ ಯೋಗಾಶ್ರಮ ಸಂಸ್ಥಾಪಕ ಮಂಜುನಾಥ ಗುರೂಜಿ ಭಾನುವಾರ ಹಮ್ಮಿಕೊಂಡಿದ್ದ ನಾಲ್ಕನೆ ಸರ್ವಧರ್ಮ ಉಚಿತ ಆದರ್ಶ 10 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.

ಸಾಮೂಹಿಕ ವಿವಾಹಗಳಿಂದ ಮದುವೆಗೆ ಮಾಡುವ ದುಂದು ವೆಚ್ಚ ಕಡಿಮೆಯಾಗುತ್ತದೆ. ದಾಂಪತ್ಯಕ್ಕೆ ಕಾಲಿಟ್ಟ ನವ ಜೋಡಿಗಳು ಸಾಮರಸ್ಯದಿಂದ ಬದುಕು ಸಾಗಿಸಿ ಎಂದರು. ಯೋಗಾಶ್ರಮದ ಕಾರ್ಯದರ್ಶಿ ಮಾತಾಶ್ರೀ ಲಕ್ಷೀದೇವಿ ಮಾತನಾಡಿ, ಸಾಮೂಹಿಕ ವಿವಾಹದಿಂದ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು. ರಾರವಿ ಪ್ರಥಮ ಆರೋಗ್ಯ ಕೇಂದ್ರ ಹಿರಿಯ ಆರೋಗ್ಯ ನಿರೀಕ್ಷ ಮಹಮದ್ ಕಾಶಿಂ

ಪ್ರಾಧ್ಯಪಕ ಮೈಸೂರು ಡಾ.ರಾಜಶೇಖರ ಜಮದಂಡಿ, ಡಿಎಸ್‌ಎಸ್ ಪ್ರಮುಖ ಮರಿಸ್ವಾಮಿ, ಪಂಚಾಮಿಸಾಲಿ ಪ್ರಮುಖ ಚಾಪಿ ಚಂದ್ರಪ್ಪ, ಗ್ರಾಪಂ ಅಧ್ಯಕ್ಷೆ ಜ್ಯೋತಿ ಮರುಳಸಿದ್ದಪ್ಪ, ಪ್ರಮುಖರಾದ ಡಾ.ಎ.ಚನ್ನಪ್ಪ, ಅಜಯ್ ಬಣಕಾರ, ಕುಮಾರಿ ಮಾಣಿಕ್ಯ, ಹುಲುಗಪ್ಪ, ವೀರೇಶ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net