ಭಾವೈಕ್ಯಕ್ಕೆ ಧಕ್ಕೆ ತಂದರೆ ಕ್ರಮ

20.ktal.01
Published on

ಕವಿತಾಳ: ಮೊಹರಂ ಅನ್ನು ಶಾಂತಿಯಿಂದ ಆಚರಿಸಬೇಕು ಎಂದು ಪಿಎಸ್‌ಐ ವೆಂಕಟೇಶ ನಾಯಕ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆಯಲ್ಲಿ ಗುರುವಾರ ಮಾತನಾಡಿದರು. ಮೊಹರಂ ಭಾವೈಕ್ಯದ ಹಬ್ಬವಾಗಿದ್ದು, ಯಾರಾದರೂ ಅಹಿತಕರ ಘಟನೆಗೆ ಮುಂದಾದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮದ್ಯ ಅಕ್ರಮ ಮಾರಾಟದ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ನೀಡಿದರೆ ಕ್ರಮ ವಹಿಸಲಾಗುವುದು ಎಂದರು.

ಪ್ರಮುಖರಾದ ಆಜಂಪಾಷಾ ಮುಲ್ಲಾ, ಮಹಮದ್ ಪಾಷಾ, ಅಕ್ಬರ್ ಸಾಬ್ ಬೋದನಾ, ಲಾಲ್ ಅಹ್ಮದ್, ರಹಿಮುದ್ದೀನ್, ಭೀಮಣ್ಣ ಕಾಚಪೂರ, ರಾಜ್ ಯಾದವ, ಬೀರಪ್ಪ ಪೂಜಾರಿ, ಪೊಲೀಸ್ ಸಿಬ್ಬಂದಿ ವಿಶ್ವಕ್ರಾಂತಿ, ಚಂದ್ರಶೇಖರ, ರಾಜ ಮಹ್ಮದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net