

ಹುಬ್ಬಳ್ಳಿ: ಇಲ್ಲಿಯ ಲಿಂಗರಾಜ ನಗರದ ಆದರ್ಶ ವಿಜ್ಞಾನ ಕಾಲೇಜ್‌ನಲ್ಲಿ 2025-26ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಸೋಮವಾರ ಏರ್ಪಾಟಾಗಿತ್ತು.
ಪ್ರೊ.ಎಸ್.ಬಿ. ಕುನ್ನೂರ ಮಾತನಾಡಿ, ಮನುಷ್ಯ ಉದಾತ್ತ ಧ್ಯೇಯಗಳೊಂದಿಗೆ ಜೀವಿಸಬೇಕು. ಎಷ್ಟು ವರ್ಷ ಜೀವಿಸುತ್ತೇವೆ ಎಂಬುದು ಮುಖ್ಯವಲ್ಲ, ಹೇಗೆ ಬದುಕುತ್ತಿದ್ದೇವೆ ಎನ್ನುವುದು ಮುಖ್ಯ ಎಂದರು.
ಪ್ರೊ.ಬಿ.ಸಿ. ಗೌಡರ ಮಾತನಾಡಿ, ಅನಗತ್ಯ ಮೊಬೈಲ್ ಫೋಣ್ ಬಳಕೆ ಮಾಡಬಾರದು. ಕಲಿಕೆಯ ಮೇಲೆ ದುಷ್ಟ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಸಂಸ್ಥೆ ಅಧ್ಯಕ್ಷ ಲಿಂಗರಾಜ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ ಇಷ್ಟಪಟ್ಟು, ಆಸಕ್ತಿಯಿಂದ ಓದಬೇಕೆಂದು ತಿಳಿಸಿದರು.
ಗಣಿತ ವಿಭಾಗದ ಪ್ರೊ. ಡ್ಯಾನಿಯಲ್ ಹೊಸಕೇರಿ ಮಾತನಾಡಿದರು.
ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಪುಷ್ಪ ನೀಡಿ ಆರತಿ ಬೆಳಗಿ ಸ್ವಾಗತಿಸಲಾಯಿತು. ವಿದ್ಯಾರ್ಥಿನಿ ಸಂಜನಾ ಅರ್ಕಸಾಲಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯೆ ಸುನಂದಾ ಮೆಣಸಿನಕಾಯಿ ಸ್ವಾಗತಿಸಿದರು. ರಶ್ಮೀತಾ ಶೆಟ್ಟಿ ವಂದಿಸಿದರು. ಕವಿತಾ ಕೆ. ನಿರೂಪಿಸಿದರು.