ಅತಿಯಾದ ಮೊಬೈಲ್ ಬಳಕೆಯಿಂದ  ಹಾನಿ

10ATHANIGRAMIN1.jpg
Published on

ಅಥಣಿ ಗ್ರಾಮೀಣ: ಗ್ರಾಮೀಣ ಸೊಗಡಿನ ಹಾಡು, ನೃತ್ಯ ಕಲೆ ಪೋಷಿಸದಿದ್ದರೆ ಮುಂಬರುವ ದಿನಗಳಲ್ಲಿ ಸನಾತನ ಸಂಸ್ಕೃತಿಗೆ ಸಂಚಕಾರ ಬಂದೊದಗಲಿದೆ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಅಥಣಿ ತಾಲೂಕಿನ ದೇಸಾಯರಟ್ಟಿ ಗ್ರಾಮದಲ್ಲಿ ಪಾಯಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಗಾನಯೋಗಿ ಮೆಲೋಡಿಸ್ ಆರ್ಕೆಸ್ಟ್ರಾ ಸಂಗೀತ ರಸಮಂಜರಿ ಹಾಗೂ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಕರು ರಾಕ್-ಪಾಪ್ ಸಂಗೀತದೆಡೆಗೆ ಮಾರು ಹೋಗಿ ಸಭ್ಯತೆಯ ಎಲ್ಲೆ ಮೀರುತ್ತಿದ್ದಾರೆ. ಹಂತಿ ಹಾಡು, ಸೋಬಾನ, ಗೀಗೀ, ಡೊಳ್ಳು ಕುಣಿತ, ಕರಬಲ್, ಲಾವಣಿ, ಬೀಸುವ ದಿಬ್ಬಣ ಹಾಡುಗಳಲ್ಲಿ ಪರಿಮಳ ತುಂಬಿದೆ. ಜಾತ್ರೆಗಳಲ್ಲಿ ದೇಸಿ ಸಂಸ್ಕೃತಿ ಕಲಾಪ್ರದರ್ಶನ ಏರ್ಪಡಿಸುತ್ತಿರುವುದು ಶ್ಲಾಘನೀಯ. ಅತಿಯಾದ ಮೊಬೈಲ್ ಬಳಕೆ ಜೀವ ಹಾಗೂ ಜೀವನಕ್ಕೆ ಹಾನಿಕರವಾಗಿದೆ. ಸಂಸ್ಕೃತಿ ಉಳಿಸುವ ಹಾಡು, ಜನಪದ ನೃತ್ಯ ನೋಡಬೇಕು ಎಂದರು.

ಕೆಎಂಎಫ್ ನಿರ್ದೇಶಕ ಅಪ್ಪಾಸಾಬ ಅವತಾಡೆ, ಗುರುಮೂರ್ತಯ್ಯ ಕಾಡದೇವರಮಠ ಮಾತನಾಡಿದರು. ಪಿಕೆಪಿಎಸ್ ಅಧ್ಯಕ್ಷ ಶಿವಾಜಿ ನಿಕ್ಕಂ ಅಧ್ಯಕ್ಷತೆ
ವಹಿಸಿದ್ದರು. ಮುಖಂಡರಾದ ಧರೆಪ್ಪ ಠಕ್ಕಣ್ಣವರ, ಸಿದ್ದರಾಮ ಕಳಸಣ್ಣವರ, ಈರಪ್ಪ ಬಿರಾದಾರ,
ನಾರಾಯಣ ಸಾವಂತ, ಅಪ್ಪಾಸಾಬ ಚವ್ಹಾಣ, ವಿಜಯ ನಿಕ್ಕಂ, ರಾಮಪ್ಪ ಚವ್ಹಾಣ, ಅನಿಲ ಸಾವಂತ, ಪಿಂಟು ಪವಾರ ಇತರರಿದ್ದರು.
ದೇಸಾಯರಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂಗೀತ ರಸಮಂಜರಿ ಹಾಗೂ ವಿವಿಧ ಸ್ಪರ್ಧೆಗಳಿಗೆ ಮಾಜಿ ಶಾಸಕ ಮಹೇಶ ಕುಮಠಳ್ಳಿ ಚಾಲನೆ ನೀಡಿದರು. ಅಪ್ಪಾಸಾಬ ಅವತಾಡೆ, ಶಿವಾಜಿ ನಿಕ್ಕಂ, ಗುರುಮೂರ್ತಯ್ಯ ಕಾಡದೇವರಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net