ಜೆಜಿಎಂ ಕಾಮಗಾರಿ ವೇಳೆ ವಿದ್ಯುತ್ ತಗುಲಿ ಕಾರ್ಮಿಕ ಸಾವು

Crime Logo
Published on

ಹಾನಗಲ್ಲ: ಜಲಜೀವನ ಮಷಿನ್ ಯೋಜನೆಯ ಕಾಮಗಾರಿ ಮಾಡುತ್ತಿದ್ದ ವೇಳೆ ಕಾರ್ಮಿಕನಿಗೆ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಉಪ್ಪುಣಸಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಗ್ರಾಮದ ಮುರುಗಯ್ಯ ಬಸಯ್ಯ ಹಿರೇಮಠ (28) ಮೃತ ದುರ್ದೈವಿ.
ಈತ ಗ್ರಾಮದಲ್ಲಿ ನಡೆದಿದ್ದ ಜಲಜೀವನ ಮಷಿನ್ ಯೋಜನೆಯ ಪೈಪ್‌ಲೈನ್ ಜೋಡಣೆಯಲ್ಲಿ ಕೆಲಸ ಮಾಡುತ್ತಿದ್ದ. ಈ ಸಮಯದಲ್ಲಿ ಮೇನ್ ಪೈಪ್ ಲೈನ್ ಜೋಡಿಸುವಾಗ ಡ್ರೀಲ್ ಮಷಿನ್‌ನ ವಿದ್ಯುತ್ ಲೈನ್ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net