ಹರ್ಲಾಪೂರ ಕೊಟ್ಟೂರೇಶ್ವರ ಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ

15GDG04
ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಕೊಟ್ಟೂರೇಶ್ವರ ಮಠದ ಜಾತ್ರಾಮಹೋತ್ಸವ ಹಾಗೂ ಕೊಟ್ಟೂರೇಶ್ವರ ಪುರಾಣ ಕಾರ್ಯಕ್ರಮವನ್ನು ಮಹಾಲಿಂಗೇಶ್ವರ ಮಠದ ಚನ್ನ ವೀರಮಹಾಸ್ವಾಮಿಗಳು ಉದ್ಘಾಟಿಸಿದರು. ಮಲ್ಲಿಕಾರ್ಜುನ ಶಾಸ್ತ್ರಿಗಳು, ಗುರುಸಿದ್ಧ ಶಿವಾಚಾರ್ಯರು, ಸಿದ್ದಲಿಂಗ ಸ್ವಾಮೀಜಿಗಳು, ಒಪ್ಪತ್ತೇಶ್ವರ ಶ್ರೀಗಳು, ಕೈಲಾಸಲಿಂಗ ಶಿವಾಚಾರ್ಯರು ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಸಮಾಜದ ಅಂಕು ಡೊಂಕುಗಳನ್ನು ತಿದ್ದಲು 12 ನೇ ಶತಮಾನದ ಶಿವ ಶರಣರು ಹೇಳಿ ಕೊಟ್ಟ ತತ್ವೋಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕಪಡಿಸಿಕೊಳ್ಳಬೇಕು ಎಂದು ಮಹಾಲಿಂಗಪೂರದ ಮಹಾಲಿಂಗೇಶ್ವರ ಮಠದ ಚನ್ನ ವೀರಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಹರ್ಲಾಪೂರ ಗ್ರಾಮದಲ್ಲಿ ಶುಕ್ರವಾರ ಕೊಟ್ಟೂರೇಶ್ವರ ಮಠದ ಜಾತ್ರಾಮಹೋತ್ಸವ ಹಾಗೂ ಹಠಯೋಗಿ ಕೊಟ್ಟೂರೇಶ್ವರ ಪುರಾಣ ಕಾರ್ಯಕ್ರಮ ಪ್ರಾರಂಭೊತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಇಂದಿನ ಒತ್ತಡಯುಕ್ತ ಬದುಕಿಗೆ ಶರಣರು ತತ್ವಗಳು ಪೂರಕವಾಗಿದೆ. ಇಂತಹ ಧಾಮಿರ್ಕ ಕಾರ್ಯಗಳಲ್ಲಿ ಅವುಗಳನ್ನು ಆಲಿಸಿ ಅಳವಡಿಸಿಕೊಳ್ಳಬೇಕು ಎಂದರು.
ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮಾತನಾಡಿ, ಮಠದಲ್ಲಿ ನಡೆಯುವ ಪ್ರತಿಯೊಂದು ದಾಮಿರ್ಕ ಕಾರ್ಯಕ್ರಗಳ ಯಶಸ್ವಿಗೆ ಗುರು ಶಿಷ್ಯರ ಸಂಭಂದಗಳು ಅನೋನ್ಯವಾಗಿರಬೇಕು. ಇಂತಹ ಕಾರ್ಯಕ್ರಮಗಳಿಂದಲೇ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಪರಸ್ಪರ ಸಹಾಯ, ಸಹಕಾರ ಪ್ರಮುಕ ಸ್ಥಾನ ವಹಿಸುತ್ತದೆ ಎಂದು ಸಲಹೆ ನೀಡಿದರು.
ಬಿಜೆಪಿ ರಾಜ್ಯ ಒಬಿಸಿ ಟಕದ ಕಾರ್ಯದಶಿರ್ ರವಿ ದಂಡಿನ, ಈ ಭಾಗದಲ್ಲಿ ಕೊಟ್ಟೂರೇಶ್ವರ ಮಠವು ನಿರಂತರ ಧಾಮಿರ್ಕ ಕಾರ್ಯಕ್ರಮಗಳನ್ನು ಸಂಟಿಸುವದರೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದೆ. ಗ್ರಾಮಸ್ಥರು ತಮಲ್ಲಿಯ ತಮೋ ಗುಣಗಳನ್ನು ತ್ಯಜಿಸಿ ಮಠದಲ್ಲಿ ನಡೆಯುವ ಪ್ರತಿಯೊಂದು ಕಾರ್ಯದಲ್ಲಿ ಪಾಲ್ಗೊಂಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಖೇಳಗಿಮಠದ ಮಲ್ಲಿಕಾರ್ಜುನ ಶಾಸ್ತ್ರಿಗಳು ಹಿರೇಮಠ ಅವರು ಪುರಾಣ ಆರಂಭಿಸಿದರು. ಗುರುಸಿದ್ಧ ಶಿವಾಚಾರ್ಯರು, ಸಿದ್ದಲಿಂಗ ಸ್ವಾಮೀಜಿಗಳು, ಒಪ್ಪತ್ತೇಶ್ವರ ಶ್ರೀಗಳು, ಕೈಲಾಸಲಿಂಗ ಶಿವಾಚಾರ್ಯರು, ಸಿದ್ಧಲಿಂಗೇಶ ಯಾಳವಾಢ, ಶಿವಾನಂದ ಪಟ್ಟೇದ, ಸೋಮನಗೌಡ ಕೆಂಚನಗೌಡ, ಅಕ್ಕಮ್ಮ ಕೋಗಿಲೆ, ಕ್ಕೀರಪ್ಪ ಹುಯಿಲಗೋಳ, ಹಾಗೂ ಶರಣಪ್ಪಗೌಡ ಪಾಟೀಲ, ಮಲ್ಲಪ್ಪ ಕೀಂದ್ರಿ, ರಾಮಣ್ಣ ಬೆಳಧಡಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net