ಹರ್ಲಾಪೂರದಲ್ಲಿ ಸುಗಮ ಸಂಗೀತೋತ್ಸವ

20GDG02
Published on

ಗದಗ: ಬಸವಾನಂದ ಶಿವಯೋಗಿಗಳವರ ಸೇವೆ ಸಿಗುವುದು ರ್ದುಲಭ, ಸಿಕ್ಕರೆ ಬಹುಲಾಭ ಎಂದು ಮಾಜಿ ಸೈನಿಕ ನಾಗಪ್ಪ ಸಂಬಾಪೂರ ಅವರು ಹೇಳಿದರು.
ತಾಲೂಕಿನ ಹರ್ಲಾಪೂರ ಗ್ರಾಮದ ಬಸವಾನಂದ ಶಿವಯೋಗಿಗಳವರ ಬಸವಾನಂದ ಸಾಂಸತಿಕ ಸೇವಾ ಸಂಸ್ಥೆಯಲ್ಲಿ ಸೋಮವಾರ ಸುಗಮ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಾನಂದ ಶಿವಯೋಗಿಗಳವರ ಸೇವೆ ಮಾಡುವುದು ಪುಣ್ಯದ ಕೆಲಸ. ಅಪರೂಪದ ವ್ಯಕ್ತಿಗಳಿಗೆ ಮಾತ್ರ ಈ ಭಾಗ್ಯ ದೊರೆಯುತ್ತದೆ. ಮಠ ಮಾನ್ಯಗಳ ಸೇವೆಯಲ್ಲಿ ಯುವ ಜನರು ತಮ್ಮನ್ನು ತಾವು ತೋಡಿಗಿಸಿಕೊಳ್ಳಬೇಕು ಎಂದರು.
ಸೇವಾ ಸಂಸ್ಥೆಯ ಅಧ್ಯ ವೇದಮೂತಿರ್ ಕೀರಯ್ಯ ಶ್ರೀಗಳು ಮಾತನಾಡಿ, ಬಸವಾನಂದ ಶಿವಯೋಗಿಗಳವರ ಮನಸ್ಸು ಹಗುರವಾಗಬೇಕಾದರೆ ಸಂಗೀತ ಬಹಳ ಅವಶ್ಯ, ಸಂಗೀತಕ್ಕೆ ಸೋಲದ ಮನಸ್ಸುಗಳೆಲ್ಲ ಸಂಗೀತ ಕೇಳಿ ಪುನೀತರಾಗಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶರಣುಕುಮಾರ ಅವರು ಸಂಗೀತ ಕಾರ್ಯಕ್ರಮ ನಡೆಸಿದರು. ಶಿವಾನಂದ ಮುಂಡರಗಿ, ರವಿ ಗೌಡ್ರ, ನಾಗಪ್ಪ ನಾಗರಾಳ, ಬಸವಾನಂದಸ್ವಾಮಿ, ಸದಾನಂದ ಶಾಸ್ತ್ರಿ, ಸವಿತಾ ಹತಿರ್ಮಠ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net