ರೈತರ, ಕಾರ್ಮಿಕರ ಆಶೋತ್ತರಗಳಿಗೆ ಸ್ಪಂದಿಸಿ

7BK1
Published on

ಬಸವಕಲ್ಯಾಣ: ಗ್ರಾಮೀಣ ಭಾಗದ ಶುಚಿತ್ವ, ಗ್ರಾಮ ನೈರ್ಮಲ್ಯ, ಶಿಕ್ಷಣ ಮತ್ತು ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಿ, ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.
ಹಾರಕೂಡ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಆಯೋಜಿಸಿದ್ದ ಅಧ್ಯಕ್ಷ -ಉಪಾಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೃಷಿಕರ, ಕೃಷಿ ಕಾರ್ಮಿಕರ ಆಶೋತ್ತರಗಳಿಗೆ ಸ್ಪಂದಿಸಿ, ಜನರ ನೆಮ್ಮದಿ ಬದುಕಿಗೆ ಆಶಾಕಿರಣವಾಗಿ ಗ್ರಾಪಂ ಕೆಲಸ ನಿರ್ವಹಿಸಬೇಕು ಎಂದರು.
ಗ್ರಾಪAಗಳು ಪ್ರಬುದ್ಧ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿವೆ. ಈ ವ್ಯವಸ್ಥೆಯ ಪ್ರತಿ ಕಾರ್ಯದಲ್ಲೂ ರಾಷ್ಟç ಚಿಂತನೆ ಅಳವಡಿಸಿಕೊಳ್ಳಬೇಕಿದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ ನಮ್ಮದು. ಪ್ರತಿ ಗ್ರಾಮದ ಅಭಿವೃದ್ಧಿಯಿಂದ ರಾಷ್ಟಾçಭಿವೃದ್ಧಿ ಸಾಧಿಸ ಬೇಕಾದ್ದು ತುರ್ತು ಅಗತ್ಯಗಳಲ್ಲಿ ಒಂದು ಎಂದರು.
ಕಾAಗ್ರೆಸ್ ನಾಯಕಿ ಮಾಲಾ ನಾರಾಯಣರಾವ್ ಮಾತನಾಡಿ, ಪಂಚಾಯಿತಿ ಅಧಿಕಾರ ಸ್ವೀಕರಿಸಿದವರು ಜಾತ್ಯಾತೀತವಾಗಿ ಕಾರ್ಯನಿರ್ವಹಿಸಿ, ಹಾರಕೂಡ ಗ್ರಾಮ ಪಂಚಾಯಿತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಬೇಕು ಎಂದರು.
ಗ್ರಾಪA ನೂತನ ಅಧ್ಯಕ್ಷೆ ಶೋಭಾವತಿ ವಿ. ಹಾಗೂ ಉಪಾಧ್ಯಕ್ಷೆ ಸಾವಿತ್ರಾ ಆರ್. ಪ್ರಮಾಣ ವಚನ ಸ್ವೀಕರಿಸಿ ಪದಗ್ರಹಣ ಮಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಮುಖಂಡರಾದ ರಾಜಕುಮಾರ ಪಾಟೀಲ್ ಹಾರಕೂಡ, ಗೌತಮ್ ನಾರಾಯಣರಾವ್, ಪೃಥ್ವಿರಾಜ ದೇಗಾಂವ, ರಾಮಲಿಂಗ ರೆಡ್ಡಿ, ಜಗನ್ನಾಥ ಅಡೆ, ಅಯ್ಯಪ್ಪ ಸಜ್ಜನಶೆಟ್ಟಿ, ಶೇಖರ ಕಾಂಬಳೆ ಇತರರಿದ್ದರು. ಪಿಡಿಒ ವಿಷ್ಣುಕಾಂತ ರೆಡ್ಡಿ ಸ್ವಾಗತಿಸಿದರು. ಸಿದ್ರಾಮ ಹೆಗಡೆ ವಂದಿಸಿದರು. ಸದಸ್ಯ ಚನ್ನಪ್ಪ ಹಳ್ಕರ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net